ಬೀಜಿಂಗ್: ಜುಲೈ ತಿಂಗಳ ನಂತರ ಮೊದಲ ಬಾರಿಗೆ ಸ್ಥಳೀಯವಾಗಿ ಹರಡುವ ಕೋವಿಡ್-19 ಪ್ರಕರಣಗಳು ಕಂಡು ಬಂದಿಲ್ಲ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ಸೋಮವಾರ ತಿಳಿಸಿದೆ.
Advertisement
ಇತ್ತೀಚೆಗೆ ಜುಲೈ 20ರಂದು ಪೂರ್ವ ನಗರವಾದ ನಾನ್ಜಿಂಗ್‍ನ ಕೆಲವು ವಿಮಾನ ನಿಲ್ದಾಣದ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಚೀನಾದಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ದೇಶಾದ್ಯಂತ ಸ್ಥಳೀಯ ಅಧಿಕಾರಿಗಳು ಲಕ್ಷಾಂತರ ಜನರಿಗೆ ಸಾಮೂಹಿಕ ಕೋವಿಡ್ ಟೆಸ್ಟ್ ಸೇರಿದಂತೆ, ಸೋಂಕನ್ನು ತಡೆಗಟ್ಟುವ ಕಠಿಣ ಕ್ರಮ, ಐಸೋಲೇಶನ್ ಮತ್ತು ಸೋಂಕಿತರಿಗೆ ಚಿಕಿತ್ಸೆ ಪಡೆಯಲು ಸೂಚಿಸಿದ್ದರು. ಇದನ್ನೂ ಓದಿ:ಡಿಸ್ಚಾರ್ಜ್ ಬಳಿಕವೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಬಸವರಾಜ್ ಬೊಮ್ಮಾಯಿ
Advertisement
Advertisement
ಸದ್ಯ ಈವರೆಗೂ ಯಾವುದೇ ಸಾವಿನ ಪ್ರಕರಣಗಳು ಕೂಡ ಪತ್ತೆಯಾಗಿಲ್ಲ. ಅಲ್ಲದೇ ಶಾಂಘೈನ ಹಣಕಾಸು ಕೇಂದ್ರದ ಸಮೀಪವಿರುವ ಜಿಯಾಂಗ್ಸು ಪ್ರಾಂತ್ಯದ ನಾನ್ಜಿಂಗ್ ಮತ್ತ ಯಾಂಗ್‍ಜ್ಹು ನಗರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದ್ದು, ಚೀನಾ ದೇಶಾದ್ಯಂತ ಆಗಸ್ಟ್ ಆರಂಭದ ನಂತರ ಹೊಸ ಸ್ಥಳೀಯ ಪ್ರಕರಣಗಳು ಕಳೆದ ವಾರ ಏಕ-ಅಂಕಿಗೆ ಇಳಿದಿದೆ. ಇದನ್ನೂ ಓದಿ:ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!
Advertisement