ವಿಜಯಪುರ: ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೆಂಡ್ ಆಗಿರುತ್ತೆ ಎಂದು ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿದರು.
ನಗರದಲ್ಲಿ ಫುಡ್ ಕಿಟ್ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್‍ನಲ್ಲಿ ನನಗೆ ಅನುಭವ ಆಗಿಲ್ಲ. ಜೀವನಲ್ಲಿ ಎರಡು ರೀತಿಗಳಿವೆ. ಒಂದು ಶಾರ್ಟ್ ಕಟ್ ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೀತಿವಿ, ಪ್ರತಿಯೊಂದು ಸ್ಟೆಪ್ ಬೈ ಸ್ಟೆಪ್ ಆಗುತ್ತೆ. ಶಾರ್ಟ್ ಕಟ್ ತಗೊಂಡ್ರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ ಎಂದರು.
ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು, ನಮ್ಮ ಕೆಲಸದ ಮೇಲೆ ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಗಮನಹರಿಸಬೇಕು. ಹನ್ನೆರಡು ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೇನೆ, ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸ ಇದೆ – ಡ್ರಗ್ಸ್ ಕೇಸ್ ಬಗ್ಗೆ ರಾಗಿಣಿ ಮಾತು
ಯಾರಾದ್ರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರೆ ಬಹುಷ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ರೀತಿಯ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದರು.