– ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ ಅರ್ಚಕ
ಜೈಪುರ: ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.
Advertisement
ಕರೌಲಿ ಜಿಲ್ಲೆಯ ಗ್ರಾಮವೊಂದರ ಅರ್ಚಕ ಬಾಬುಲಾಲ್ ಸಾವನ್ನಪ್ಪಿದ್ದು, ಜಿಲ್ಲೆಯ ಹಳ್ಳಿಯೊಂದರ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ ಸುಮಾರು 5.2 ಎಕರೆ ಭೂಮಿಯನ್ನು ಅವರು ಹೊಂದಿದ್ದರು. ಈ ಭೂಮಿಯನ್ನು ಅರ್ಚಕರಿಗೆ ಪ್ರಮುಖ ಆದಾಯದ ಮೂಲವಾಗಿ ನೀಡಲಾಗಿತ್ತು. ದೇವಾಲಯದ ಟ್ರಸ್ಟ್ ಗೆ ಸೇರಿದ ಭೂಮಿಯಾದರು ಇದರ ಉಸ್ತುವಾರಿಯನ್ನು ಅರ್ಚಕರಿಗೆ ನೀಡಲಾಗಿತ್ತು. ಅವರು ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡುವ ಕಾರ್ಯವನ್ನು ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
Advertisement
Kailash Meena, the main accused in the case has been arrested. Six teams have been formed to investigate the matter. Efforts are on to nab the other accused: Mridul Kachhwa, SP, Karauli. #Rajasthan pic.twitter.com/Z69mzcpslM
— ANI (@ANI) October 9, 2020
Advertisement
ದೇವಾಲಯದಲ್ಲಿ ಸೇವೆ ಸಲ್ಲಿಸುವ ಕಾರಣದಿಂದ ಅರ್ಚಕರಿಗೆ ನೀಡುವ ಈ ಪದ್ದತಿಯನ್ನು ಮಂದಿತ ಮಾಫಿ ಎಂದು ಕರೆಯಲಾಗುತ್ತದೆ. ರಾಜಸ್ಥಾನದ ಹಲವು ಗ್ರಾಮಗಳಲ್ಲಿ ದೇವಾಲಯದ ಉಸ್ತುವಾರಿ ವಹಿಸುವ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗುತ್ತದೆ.
Advertisement
ಈ ಭೂಮಿ ಮೇಲೆ ಕಣ್ಣಿಟ್ಟಿದ್ದ ಗುಂಪು ವಿವಾದವನ್ನು ಸೃಷ್ಟಿ ಮಾಡಿತ್ತು. ಅರ್ಚಕ ಬಾಬುಲಾಲ್ ಹೊಂದಿದ್ದ ಜಮೀನು ತಮ್ಮದೆಂದು ಗ್ರಾಮದ ಪ್ರಭಾವಿ ಗುಂಪೊಂದು ಗಲಾಟೆ ಮಾಡಿತ್ತು. ಈ ಗಲಾಟೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಅರ್ಚಕರ ಮೇಲೆ ದಾಳಿ ನಡೆಸಿದ್ದ ಗುಂಪು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿತ್ತು.
Priest Babulal gave a statement to police in the hospital that few influential people including accused Kailash Meena & his sons tried to encroach his land & during a dispute accused set the fence on fire in which priest got severely burnt: Mridul Kachhwa, SP, Karauli, Rajasthan https://t.co/VqcMqYgYsL
— ANI (@ANI) October 9, 2020
ತೀವ್ರ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅರ್ಚಕರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕರು ಸಾವನ್ನಪ್ಪಿದ್ದರು. ಸಾವನ್ನಪ್ಪುವ ಮುನ್ನ ಅರ್ಚಕರಿಂದ ಹೇಳಿಕೆ ಪಡೆದ ಪೊಲೀಸರು ಘಟನೆ ಸಂಬಂಧ ಪ್ರಮುಖ ಆರೋಪಿ ಕೈಲಾಶ್ ಮೀನಾನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು 6 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸ್ಥಳೀಯ ಎಸ್‍ಪಿ ಮಾಹಿತಿ ನೀಡಿದ್ದಾರೆ.
As per the data of National Crime Records Bureau, Rajasthan stands at the first position as far as crimes against women are concerned. I urge Rahul Gandhi, who indulges in political tourism to BJP-ruled states, to pay attention to Rajasthan: Rajyavardhan Singh Rathore, BJP https://t.co/crq28PYyEO
— ANI (@ANI) October 9, 2020