– ಕಳೆದ 7 ದಿನಗಳಿಂದ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಂದ ಪಾಸಿಟಿವ್ ಕೇಸ್ ಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಆಗಿದೆ. ಆದರೆ ಸಾವಿನ ಪ್ರಮಾಣ ಇಳಿಕೆಯಾಗುತ್ತಿಲ್ಲ. ದಿನೇ ದಿನೇ ಸಾವಿನ ಸಂಖ್ಯೆ 250ರ ಗಡಿ ದಾಟುತ್ತಿದೆ. ನಿನ್ನೆಯೂ ಕೂಡ ಡೆತ್ ಪ್ರಮಾಣ 3.24% ಬಂದಿದೆ. ಪಾಸಿಟಿವ್ ಬಂದ ನೂರು ಜನರಲ್ಲಿ 3 ಜನ ಡೆತ್ ಆಗ್ತಾ ಇರೋದು ವರದಿ ಆಗಿದೆ. ಹಾಗೆಯೇ ಕಳೆದ ಏಳು ದಿನಗಳಿಂದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಏಳು ದಿನಗಳಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ 3% ಕ್ಕೂ ಹೆಚ್ಚಿದೆ ಇನ್ನೂ ಕೆಲ ಜಿಲ್ಲೆಗಳಲ್ಲಿ 2% ಕ್ಕೂ ಹೆಚ್ಚಿದೆ.
ಕೇಸ್ ಕಡಿಮೆ ಆದರೂ ಡೆತ್ ಇಳಿಕೆಯಾಗದೇ ಇರೋದು ಸರ್ಕಾರದ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ. ಜೊತೆಗೆ ಡೆತ್ ಪ್ರಮಾಣ ಕಡಿಮೆ ಆಗದಿದ್ದರೆ ಅನ್‍ಲಾಕ್ ಮಾಡಬಾರದು. ನಿರ್ಲಕ್ಷ್ಯ ಮಾಡಿದ್ರೆ ಮತ್ತೆ ಕೊರೊನಾ ಸ್ಫೋಟ ಆಗೋದ್ರಲ್ಲಿ ಅನುಮಾನ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ ಕಳೆದ 7 ದಿನಗಳಿಂದ ಡೆತ್ ಏರಿಕೆ ವಿವರವನ್ನ ವಾರ್ ರೂಂ ಬಿಡುಗಡೆ ಮಾಡಿದ್ದು ಆತಂಕ ಹುಟ್ಟಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೀದರ್ 4.98%, ಬೆಂಗಳೂರು ನಗರ 4.67%, ಕಲಬುರುಗಿ 3.68%, ಹಾವೇರಿ 3.54%, ಯಾದಗಿರಿ 3.23%, ಬೆಂಗಳೂರು ಗ್ರಾಮಾಂತರ 2.29%, ಧಾರವಾಡ 2.50%, ಬಳ್ಳಾರಿ 2.39%, ಚಾಮರಾಜನಗರ 1.86%, ವಿಜಯಪುರ 1.83%, ಉತ್ತರ ಕನ್ನಡ 1.73%, ಚಿಕ್ಕಬಳ್ಳಾಪುರ 1.67%, ಶಿವಮೊಗ್ಗ 1.64%, ಗದಗ 1.47%, ಬಾಗಲಕೋಟೆ 1.73%, ಕೊಪ್ಪಳ 1.18%
ರಾಯಚೂರು 1.17%, ತುಮಕೂರು 1.09%, ಬೆಳಗಾವಿ 1.00%, ರಾಮನಗರ 0.94%, ದಕ್ಷಿಣ ಕನ್ನಡ 0.19%, ಮೈಸೂರು 0.9%, ಕೊಡಗು 0.84%, ಹಾಸನ 0.17%, ಮಂಡ್ಯ 0.64%, ಚಿಕ್ಕಮಗಳೂರು 0.15%, ದಾವಣಗೆರೆ 0.15%, ಉಡುಪಿ 0.47% , ಕೋಲಾರ 0.44%, ಚಿತ್ರದುರ್ಗ 0.36%