– ಖಾತೆ ಅಸಮಧಾನ ಸಿಎಂ ನಿಭಾಯಿಸ್ತಾರೆ
ರಾಯಚೂರು: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳನ್ನ ಪರಿಶೀಲಿಸದೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತುರ್ತು ಕರೆ ಹಿನ್ನೆಲೆ ಬೆಂಗಳೂರಿಗೆ ಮರಳಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ವಿ.ಸೋಮಣ್ಣ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಆದ್ರೆ ಈಗ ಕಾರ್ಯಕ್ರಮಗಳನ್ನ ಅಧಿಕಾರಿಗಳ ಸಭೆಗೆ ಸೀಮಿತಗೊಳಿಸಿ ಉಳಿದ ಪ್ರವಾಸ ಮೊಟುಕುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.
ಪ್ರವಾಹ ಪೀಡಿತ ಗ್ರಾಮಗಳು ಹಾಗೂ ಕೋವಿಡ್ ಮುನ್ನೆಚ್ಚರಿಕೆ ಹಿನ್ನೆಲೆ ಆಸ್ಪತ್ರೆಗಳ ಭೇಟಿ ರದ್ದಾಗಿದೆ. ತುರ್ತು ಕೆಲಸ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದು ಆಗಸ್ಟ್ 15 ರಿಂದ ಮೂರ್ನಾಲ್ಕು ದಿನ ರಾಯಚೂರಿನಲ್ಲೆ ಇರುವುದಾಗಿ ಸಚಿವ ಸೋಮಣ್ಣ ಹೇಳಿದ್ದಾರೆ.
ಇನ್ನು ನೂತನ ಮಂತ್ರಿಗಳ ಖಾತೆ ಅಸಮಧಾನ ವಿಚಾರವಾಗಿ ಮಾತನಾಡಿದ ಸೊಮಣ್ಣ, ಮುಖ್ಯಮಂತ್ರಿಗಳು ಸಮರ್ಥರು, ಬುದ್ದಿವಂತರು ಇದ್ದಾರೆ. ಖಾತೆ ವಿಚಾರದಲ್ಲಿ ಅಸಮಧಾನಗೊಂಡಿರುವವರ ಜೊತೆ ಅವರು ಚರ್ಚೆ ಮಾಡುತ್ತಾರೆ. ಮುಖ್ಯಮಂತ್ರಿಗಳಿಗೆ ಅವರದೇ ಆದ ಅನುಭವ ಇದೆ. ನಮ್ಮ ಅವಶ್ಯಕತೆಯಿದ್ದರೆ ನಾವು ಕೈ ಜೋಡಿಸುತ್ತೇವೆ ಎಂದರು. ನನಗೆ ನನ್ನ ಖಾತೆ ಬಗ್ಗೆ ತೃಪ್ತಿ ಇದೆ ಇಲ್ಲಾ ಅನ್ನೋದಕ್ಕಿಂತ ಹೆಚ್ಚಾಗಿ ನಾನು ನನ್ನದೇ ಸ್ಟೈಲಲ್ಲಿ ಕೆಲಸ ಮಾಡುತ್ತೇನೆ. ಸೋಮಣ್ಣ ನಿಂತ ನೀರಲ್ಲ ಹರಿಯುವ ನೀರು, ನನಗೆ ಬೇರೆ ಯಾವ ಆಸೆ ಇಲ್ಲ ಅಂತ ಹೇಳಿದರು.
ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆಯ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾಹಿತಿ ಇಲ್ಲದೆ, ಅಧಿಕಾರಿಗಳು ಬಂದಿದ್ದರಿಂದ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಮಂಜೂರು ಮಾಡಿದ ವಾಹನಗಳ ಸಂಖ್ಯೆ ಹಾಗೂ ತಗುಲಿದ ವೆಚ್ಚದ ಬಗ್ಗೆಯೂ ಮಾಹಿತಿ ಇಲ್ಲದೇ ಅಧಿಕಾರಿಗಳು ಬಂದಿದ್ದರು. ಹೀಗಾದರೆ ನನ್ನದೇ ಸ್ಟೈಲ್ ನಲ್ಲಿ ಮಾತನಾಡಬೇಕಾಗುತ್ತದೆ ಹುಷಾರ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮ ಒಡೆದು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೀರಾ, ಮುಂದೆಯೂ ಅದೇ ಮಾಡಬೇಡಿ: ಶೃಂಗೇರಿ ಶಾಸಕ ರಾಜೇಗೌಡ
ಸೋಮಣ್ಣನವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾದರು. ಕಾರ್ಯಕ್ರಮದಲ್ಲಿ 35 ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಬರುವಾಗ ಕನಿಷ್ಠ ಮಾಹಿತಿ ಇಲ್ಲದೆ, ಬರುವುದು ನಿಮ್ಮ ಆಡಳಿತದ ರೀತಿ ತೋರಿಸುತ್ತದೆ. ಜಿಲ್ಲೆಯಲ್ಲಿ ಮೊದಲು ಆಡಳಿತ ವ್ಯವಸ್ಥೆ ಸರಿಮಾಡಬೇಕಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂಗೆ ಅಮಿತಾ ಶಾ ಪುತ್ರನ ಹೆಸರಿಡಬಹುದು: ಟಿಎಂಸಿ ಸಂಸದ