ಬೆಂಗಳೂರು: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಯಡಿಯೂರಪ್ಪ ಅನ್ ಲಾಕ್ ಘೋಷಣೆ ಮಾಡುತ್ತಾರಾ ಅಥವಾ ಜಿಲ್ಲಾ ಪ್ರವಾಸದ ಬಳಿಕ ಶನಿವಾರ ಘೋಷಣೆ ಮಾಡುತ್ತಾರಾ ಎಂಬ ಕುತೂಹಲ ಈಗ ಎದ್ದಿದೆ.
ಶುಕ್ರವಾರ ಸಿಎಂ ಹಾಸನ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಹೀಗಾಗಿ ಗುರುವಾರ ಅಥವಾ ಶನಿವಾರ ರಾಜ್ಯ ಸರ್ಕಾರ ಅಧಿಕೃತವಾಗಿ ಅನ್‍ಲಾಕ್ ಘೋಷಣೆ ಮಾಡುವ ಸಾಧ್ಯತೆಯಿದೆ.
Advertisement
Advertisement
ಬುಧವಾರ ಸಂಜೆ ಕೋವಿಡ್ ಸಂಬಂಧಿತ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದಾರೆ. ಸ್ಟೇಜ್ ಬೈ ಸ್ಟೇಜ್ ಅನ್ ಲಾಕ್ ಮಾಡುವ ಬಗ್ಗೆ ಸರ್ಕಾರ ಮುಂದಾಗಿದ್ದು, ಅನ್ ಲಾಕ್ ಬ್ಲೂ ಪ್ರಿಂಟ್ ತರಲು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.
Advertisement
ಪ್ಲ್ಯಾನ್ ಏನು?
ಪಾಸಿಟಿವಿಟಿ ರೇಟ್ ಶೇ.10ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಅನ್‍ಲಾಕ್ ವಿನಾಯಿತಿ ನೀಡದೇ ಇರಲು ಸರ್ಕಾರ ಮುಂದಾಗಿದೆ. ಪಾಸಿಟಿವಿಟಿ ರೇಟ್ ಶೇ.5ಕ್ಕೆ ಇಳಿಯವವರೆಗೆ ಅನ್ ಲಾಕ್ ಬೇಡವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಶುಕ್ರವಾರದ ತನಕವೂ ಪಾಸಿಟಿವಿಟಿ ರೇಟ್ ಕಾದು ನೋಡುವ ಸಾಧ್ಯತೆಯಿದೆ. ಅನ್ ಲಾಕ್ ಇರದ ಜಿಲ್ಲೆಗಳಿಗೆ ಎಂಟ್ರಿ ಎಕ್ಸಿಟ್ ಬಗ್ಗೆಯೂ ಹೆಚ್ಚಿನ ನಿಗಾ ಇಡುವ ಸಾಧ್ಯತೆಯಿದೆ. ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ