ಚಾಮರಾಜನಗರ: ಸಚಿವ ಸ್ಥಾನಕ್ಕಾಗಿ ನಾನು ಹೈಕಮಾಂಡ್ ಮೇಲೆ ಒತ್ತಡ ತಂದಿಲ್ಲ ಎಂದು ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದ್ದಾರೆ.
ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಹಳಬರು ಹಾಗೂ ಯುವಕರನ್ನು ಸೇರಿಸಿ ಆಡಳಿತ ಚುರುಕುಗೊಳಿಸುವ ಕಾರ್ಯತಂತ್ರ ನಡೆಯುತ್ತಿದೆ. ನಾನು ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕನಾಗಿದ್ದು, ಜಿಲ್ಲಾವಾರು ಪರಿಗಣಿಸಿ ಹೈಕಮಾಂಡ್ ಅವಕಾಶ ನೀಡಿದರೆ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ವೇಳೆ ಜಾರಿ ಬಿದ್ದು ಶಾನ್ವಿಗೆ ಗಾಯ
ಮೊದಲ ಬಾರಿಗೆ ಗೆದ್ದಿರುವುದರಿಂದ ಒತ್ತಡ ತರಬಾರದು ಎಂಬುದು ನನ್ನ ನಿಲುವಾಗಿದ್ದು ಪಕ್ಷದ ಆದೇಶಕ್ಕೆ ಬದ್ಧನಾಗಿರುತ್ತೇನೆ ಎಂದು ಬಿಎಸ್‍ವೈ ಆಪ್ತ ವಲಯದಲ್ಲಿರುವ ನಿರಂಜನ್ ಕುಮಾರ್ ಹೇಳಿದ್ದಾರೆ.