ಮುಂಬೈ: ನೆಟ್‌ಫ್ಲಿಕ್ಸ್,ಅಮೆಜಾನ್ ಪ್ರೈಂ, ಡಿಸ್ನಿ ಹಾಟ್‌ಸ್ಟಾರ್… ಇವುಗಳನ್ನು ಇನ್ನು ಮುಂದೆ ಒಂದೇ ಲಾಗಿನ್ ಐಡಿ ಮೂಲಕ ವೀಕ್ಷಿಸಬಹುದು. ಜಿಯೋಫೈಬರ್ ಸೆಟ್ ಟಾಪ್ ಬಾಕ್ಸ್ ಸೆಟ್‌ಟಾಪ್ ಬಾಕ್ಸ್ ಖರೀದಿಸಿದ್ರೆ ಈ ಎಲ್ಲ ಒಟಿಟಿ(ಓವರ್ ದಿ ಟಾಪ್) ಅಪ್ಲಿಕೇಶನ್‌ಗಳನ್ನು ಜಿಯೋ ಟಿವಿ ಪ್ಲಸ್ ನಲ್ಲಿ ನೋಡಬಹುದು.
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ವಾರ್ಷಿಕ ಸಭೆಯಲ್ಲಿ ಕಂಪನಿ ಈ ಘೋಷಣೆ ಮಾಡಿದೆ. ಇದರ ವಿಶೇಷ ಏನೆಂದರೆ ಧ್ವನಿ ಮೂಲಕ ಸರ್ಚ್ ಮಾಡಬಹುದಾಗಿದೆ. ಉದಾಹರಣೆಗೆ ನಟ/ನಟಿಯ ಬಗ್ಗೆ ಸರ್ಚ್ ಮಾಡಿದರೆ ಈ ಎಲ್ಲ ಒಟಿಟಿ ಪ್ಲಾಟ್‌ಫರಂನಲ್ಲಿರುವ ಆ ನಟ/ನಟಿಗೆ ಸಂಬಂಧಿಸಿದ ವಿಡಿಯೋಗಳು ಪರದೆಯಲ್ಲಿ ಕಾಣುತ್ತದೆ.
ಗ್ರಾಹಕರು ಮತ್ತು ವಾಹಿನಿಗಳು ಸಹ ಜಿಯೋ ಟಿವಿ ಪ್ಲಸ್ ಮೂಲಕ ಸಂವಹನ ಮಾಡಬಹುದು. ರಿಮೋಟ್ ಮೂಲಕವೇ ವೋಟ್ ಮಾಡಬಹುದು ಎಂದು ಅಕಾಶ್ ಅಂಬಾನಿ ತಿಳಿಸಿದರು.
ಗ್ರಾಹಕರಿಗೆ ಬೇಕಾದ ವಿಷಯಗಳು ಸುಲಭವಾಗಿ ಸಿಗಲು ಜಿಯೋ ಟಿವಿ ಪ್ಲಸ್‌ನಲ್ಲಿ ಚಲನ ಚಿತ್ರ, ಮ್ಯೂಸಿಕ್, ಲೈವ್ ಟಿವಿ, ಕಿಡ್ಸ್, ವಿಭಾಗಗಳಿವೆ.
ಯಾವುದೆಲ್ಲ ಇದೆ?
ಜಗತ್ತಿನ ಪ್ರಸಿದ್ಧ 12 ಒಟಿಟಿ ಕಂಪನಿಗಳ ಅಪ್ಲಿಕೇಶನ್‌ಗಳನ್ನು ಒಂದೇ ಐಡಿ ಮೂಲಕ ವೀಕ್ಷಿಸಬಹುದು. ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಂ ವಿಡಿಯೋ, ಡಿಸ್ನಿ ಹಾಟ್‌ಸ್ಟಾರ್, ವೂಟ್, ಸೋನಿ, ಝಿ5, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನಿಮಾ, ಶಿಮಾರೋ, ಜಿಯೋ ಸಾವನ್, ಯೂಟ್ಯೂಬ್, ಇರೋಸ್ ನೌ ಇದೆ.