ಮುಂಬೈ: ನಕಲಿ ವೆಬ್‍ಸೈಟ್ ಗಳ ಮೂಲಕ ಕೆಲ ದುಷ್ಕರ್ಮಿಗಳು ತಾವು ಜಿಯೋಮಾರ್ಟ್ ಭಾಗವೆಂದು ಬಿಂಬಿಸಿಕೊಳ್ಳುರತ್ತಿರುವರಿಗೆ ರಿಲಯನ್ಸ್ ರಿಟೇಲ್ ಎಚ್ಚರಿಕೆ ನೀಡಿದೆ. ಜಿಯೋ ಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕರನ್ನು ದುಷ್ಕರ್ಮಿಗಳು ವಂಚಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ರಿಲಯನ್ಸ್ ರಿಟೇಲ್ ತಿಳಿಸಿದೆ.
ರಿಲಯನ್ಸ್ ಪ್ಲಾಟ್‍ಫಾರ್ಮ್ ಗಳಲ್ಲಿ ಎಚ್ಚರಿಕೆಯ ನೋಟಿಸ್: ನಾವು ಸಾರ್ವಜನಿಕರ ಗಮನಕ್ಕೆ ತರಲು ಬಯಸುವ ವಿಷಯ ಏನೆಂದರೆ, ಸದ್ಯಕ್ಕೆ ನಾವು ಯಾವುದೇ ಡೀಲರ್ ಶಿಪ್ ಅಥವಾ ಫ್ರಾಂಚೈಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಫ್ರಾಂಚೈಸಿ-ಏಜೆಂಟ್ ನೇಮಕ ಮಾಡಿಕೊಂಡು, ಅವರ ಮೂಲಕ ಹೊಸ ಡೀಲರ್ ಅಥವಾ ಫ್ರಾಂಚೈಸಿಯನ್ನು ಯಾವುದೇ ಬಗೆಯಲ್ಲೂ ನೇಮಿಸಿಕೊಳ್ಳುತ್ತಿಲ್ಲ. ಫ್ರಾಂಚೈಸಿ ಆಗಿ ನೇಮಿಸಿಕೊಳ್ಳುವ ಸಲುವಾಗಿ ಯಾವ ಹಣವನ್ನು ಸಹ ಪಡೆಯುತ್ತಿಲ್ಲ ಎಂದು ರಿಲಯನ್ಸ್ ನೋಟಿಸ್ ನಲ್ಲಿ ಮಾಹಿತಿ ನೀಡಿದೆ.
ಕೆಲ ದುಷ್ಕರ್ಮಿಗಳು ತಾವುಗಳು ಜಿಯೋ ಮಾರ್ಟ್ ಭಾಗವೆಂದು ಪರಿಚಯಿಸಿಕೊಂಡು ಪ್ರಾಂಚೈಸಿ ನೀಡುವುದಾಗಿ ಜನರನ್ನು ವಂಚಿಸಲಾಗುತ್ತಿದೆ. ರಿಲಯನ್ಸ್ ರಿಟೇಲ್ ಕೆಲ ನಕಲಿ ವೆಬ್‍ಸೈಟ್ ವಿಳಾಸಗಳನ್ನು ನೋಟಿಸ್ ನಲ್ಲಿ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದೆ.
1. jmartfranchise.in
2. jiodealership.com
3. jiomartfranchises.com
4. jiomartshop.info
5. jiomartreliance.com
6. jiomartfranchiseonline.com
7. jiomartsfranchises.online
8. jiomart-franchise.com
9. jiomartindia.in.net
10. jiomartfranchise.co
ಟ್ರೇಡ್ ಮಾರ್ಕ್ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ದಾವೆ ಹೂಡಲು ಕಂಪನಿ ಹಿಂದೇಟು ಹಾಕಲ್ಲ. ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಗಮನಕ್ಕೆ ಬಂದರೆ ಕಂಪನಿಯ ಕಾನೂನು ವಿಭಾಗಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ರಿಲಯನ್ಸ್ ರಿಟೇಲ್ ಮನವಿ ಮಾಡಿಕೊಂಡು, ವಿಳಾಸ ಮತ್ತು ಮೇಲ್ ಐಡಿ ನೀಡಿದೆ.