ಜಾತಿಗಣತಿ ಕಾಂಗ್ರೆಸ್ ಪಕ್ಷ ಯಾಕೆ ಬಿಡುಗಡೆ ಮಾಡಿಲ್ಲ: ಅಶ್ವಥ್ ನಾರಾಯಣ

Public TV
1 Min Read
Ashwath Narayana

ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಕಾಂಗ್ರೆಸ್ ಕೂಡಾ ಜಾತಿ ಗಣತಿ ಬಿಡುಗಡೆ ಮಾಡಬೇಕು ಎಂದು ಆಗ್ರಹ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾಕೆ ರಿಪೋರ್ಟ್ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.

Congress flag 2 e1573529275338

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ವರದಿ ಬಗ್ಗೆ ಕೆಲ ಆರೋಪಗಳು ಕೇಳಿ ಬರ್ತಿವೆ. ಕೆಲ ಜಾತಿಗಳನ್ನು ಬೇರೆ ಜಾತಿಗೆ ಸೇರಿಸಲಾಗಿದೆ ಅಂತ ಆರೋಪ ಇದೆ. ನಾನು ಕೂಡಾ ಈ ವರದಿ ನೋಡಿಲ್ಲ. ಸರ್ಕಾರದಲ್ಲಿ ಅಂಕಿ ಅಂಶಗಳನ್ನು ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಪಬ್ಲಿಕ್ ಆಗಿ ಬಿಡುಗಡೆ ಮಾಡಬೇಕಾ ಅಂತ ಚರ್ಚೆ ಆಗುತ್ತಿದೆ. ವರದಿ ಬಿಡುಗಡೆ ಮಾಡೋ ಅವಶ್ಯಕತೆ ಸದ್ಯ ಉದ್ಬವ ಆಗಿಲ್ಲ. ಏನು ಮಾಡಬೇಕು ಅಂತ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ನಿರ್ಧಾರ ಮಾಡುತ್ತೇವೆ. ಜಾತಿ ಗಣತಿ ಬಿಡುಗಡೆ ಮಾಡಿ ಅಂತ ಮಾತಾಡೋ ಕಾಂಗ್ರೆಸ್ ಯಾಕೆ ಅವರ ಅವಧಿಯಲ್ಲಿ ಬಿಡುಗಡೆ ಮಾಡಿಲ್ಲ ಕೇಳಿ ಎಂದು ಕಾಂಗ್ರೆಸ್‍ಗೆ ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ: ದರ್ಶನ್ ವಿರುದ್ಧ ಇಂದ್ರಜಿತ್ ಗರಂ

population1

ಜನಸಂಖ್ಯೆ ನಿಯಂತ್ರಣ ನಿಯಮ ಚರ್ಚೆ ಅವಶ್ಯಕ:
ಜನಸಂಖ್ಯೆ ನಿಯಂತ್ರಣ ನಿಯಮ ಜಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ ಅವರು, ಈಗಾಗಲೇ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾರ್ಯಕ್ರಮ ಇವೆ. ಇದಕ್ಕೆ ಹೊಸದಾಗಿ ಏನಾದ್ರು ಸೇರಿಸಬೇಕಾ ಅಂತ ಚರ್ಚೆ ನಡೆಯುತ್ತಿದೆ. ರಾಜಕೀಯವಾಗಿ ನಮ್ಮ ಪಕ್ಷದಲ್ಲಿ ಚರ್ಚೆ ಆಗುತ್ತಿದೆ. ಜನರ ಅಭಿಪ್ರಾಯ ಕೂಡಾ ತೆಗೆದುಕೊಳ್ಳಲಾಗುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಏನು ಬರುತ್ತೋ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ. ಈಗಲೇ ಎಲ್ಲಾ ಜಾರಿ ಮಾಡುತ್ತೇವೆ ಅನ್ನೋ ನಿರ್ಧಾರ ಏನು ಇಲ್ಲ. ಎಲ್ಲವೂ ಚರ್ಚೆ ಆಗಬೇಕು. ಸಾರ್ವಜನಿಕರ ಅಭಿಪ್ರಾಯದ ಮೇಲೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *