– ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್
ತುಮಕೂರು: ಜಾಡಿಸಿ ಒದ್ದರೆ ಎಲ್ಲಿಹೋಗಿ ಬಿದ್ದಿರ್ತಿಯಾ ಗೊತ್ತಾ ರಾಸ್ಕಲ್, ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡಿ ಎಂದು ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.
ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಮಾಡಬೇಕಾಗಿದ್ದ ಕೆಲಸಗಳು ಸರಿಯಾಗಿ ಆಗದ್ದಕ್ಕೆ ಸಚಿವ ಮಾಧುಸ್ವಾಮಿ ಅವರು ಕೆಡಿಪಿ ಸಭೆಯಲ್ಲಿ ಎಇಇ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ ರಾಸ್ಕಲ್, ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ ಯಾಕೆ ಎಂದು ಪ್ರಶ್ನಿಸಿ ಸಭೆಯಲ್ಲಿ ಗುಡುಗಿದ್ದಾರೆ.
ಕಳೆದ 4 ರಂದೇ ಕಂಟ್ರಾಕ್ಟರ್ ಕರೆಸಿ ಮಾಡಿ ಎಂದು ಸೂಚಿಸಿದ್ದೆ. ಸೂಚನೆ ನೀಡಿದ್ದರೂ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಂಗಸ್ವಾಮಿ ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಈ ಉತ್ತರವನ್ನು ಕೇಳಿ ಕೆಂಡಮಂಡಲವಾದ ಮಾಧುಸ್ವಾಮಿ, ಯಾವ ತಪ್ಪಾಗಿದೆ? ನಿನ್ನ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೆಯಕ್ಕೆ ಹೋಗ್ತೀಯಾ? ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯ ಗೊತ್ತಾ? ಇಲ್ಲಿಗೆ ನೀನು ಕತ್ತೆ ಕಾಯೋಕ್ ಬಂದಿದ್ದಿಯ ಎಂದು ಪ್ರಶ್ನಿಸಿ ಎಇಇ ಅಧಿಕಾರಿ ರಂಗಸ್ವಾಮಿಗೆ ಲೆಫ್ಟ್ ರೈಟ್ ಫುಲ್ ಕ್ಲಾಸ್ ಮಾಡಿದ್ದಾರೆ
ಈ ನನ್ಮಕ್ಕಳನ್ನು ಸಭೆ ಕರೆದು ಎಲ್ಲರನ್ನೂ ಸಸ್ಪೆಂಡ್ ಮಾಡ್ರಿ ಎಂದು ಸಭೆಯಲ್ಲೇ ಸಿಇಒಗೆ ಮಾಧುಸ್ವಾಮಿ ಸೂಚನೆ ನೀಡಿದ್ದಾರೆ.