ಜಸ್ಪ್ರೀತ್ ಬುಮ್ರಾ ದಂಪತಿಗೆ ಅಮುಲ್ ಮದುವೆ ಶುಭಾಶಯ ಪೋಸ್ಟ್ ವೈರಲ್

Public TV
1 Min Read
amul bubmra

ನವದೆಹಲಿ: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕ್ರಿಕೆಟ್ ನಿರೂಪಕಿ ಸಂಜನಾ ಗಣೇಶನ್ ಜೋಡಿ ನಿನ್ನೆ ಗೋವಾದಲ್ಲಿ ವೈವಾಹಿಕ ಬಂಧನಕ್ಕೆ ಕಾಲಿಟ್ಟಿದ್ದರು. ಅವರಿಗೆ ಭಾರತದ ಸಿಹಿತಿಂಡಿ ಕಂಪನಿ ಅಮುಲ್ ವಿಶಿಷ್ಟ ಪೋಸ್ಟ್ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಶುಭಾಶಯ ಕೋರಿತ್ತು ಈ ಪೋಸ್ಟ್ ವೈರಲ್ ಆಗಿದೆ.

Bumrah 2

ಬುಮ್ರಾ ಮತ್ತು ಸಂಜನಾ ಗಣೇಶನ್ ಮದುವೆ ಸಮಾರಂಭವು ಗೋವಾದಲ್ಲಿ ಸರಳವಾಗಿ ಎರಡೂ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಬೂಮ್ರಾ ಇಂದಿನಿಂದ ಹೊಸ ಜೀವನ ಆರಂಭವಾಗಿದೆ. ಇಂದು ಅತ್ಯಂತ ಸಂಭ್ರಮದ ದಿನವಾಗಿದೆ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂಭ್ರಮ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಬೂಮ್ರಾ ದಂಪತಿಗೆ ಶುಭಹಾರೈಕೆ ಮಾಡಿದ್ದರು.

ಅಮೂಲ್ ಕಂಪನಿ ಕೂಡ ತನ್ನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬೂಮ್ರಾ ದಂಪತಿಗೆ ಶುಭಹಾರೈಸಿ ವಿಶೇಷ ಪೋಸ್ಟ್ ಹಾಕಿತ್ತು ಅದರಲ್ಲಿ ಅಮುಲ್ ಜಾಸ್ ಕೋ ಪ್ರೀತ್ ಮಿಲ್ ಗಾಯಿ ಅಂತ ಪೋಸ್ಟ್ ನ ಮೇಲ್ಬಾಗದಲ್ಲಿ ಬರೆದಿದ್ದು, ಬೂಮ್ರಾ ಪಕ್ಕದಲ್ಲಿ ಕುಳಿತಿರುವ ಸಂಜನಾ ಗಣೇಶನ್ ಒಂದು ಕೈಯಲ್ಲಿ ಸಿಹಿತಿಂಡಿಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಮೈಕ್ ಇಡಿದು ಬೂಮ್ರಾ ಅವರನ್ನು ಮಾತನಾಡಿಸುತ್ತಿದ್ದಾರೆ. ಬೂಮ್ರಾ ಒಂದು ಕೈನಲ್ಲಿ ಸಿಹಿತಿಂಡಿ ಹಿಡಿದುಕೊಂಡಿದ್ದರೆ ಇನ್ನೊಂದು ಕೈಯಲ್ಲಿ ಕ್ರಿಕೆಟ್ ಬಾಲ್ ಮೇಲಕ್ಕೆ ಎಸೆಯುತ್ತಿದ್ದಾರೆ. ನಂತರ ಕೆಳಭಾಗದಲ್ಲಿ ಬೌಲ್ ಯೂ ಒವರ್ ಎಂದು ಬರೆದುಕೊಂಡಿದೆ.

Bumrah 1

ಅಮುಲ್ ಈ ರೀತಿಯ ಪೋಸ್ಟ್ ಹಾಕುತ್ತಿದ್ದಂತೆ ಹಲವು ಲೈಕ್ ಗಳು ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಅಭಿಮಾನಿಗಳು ಪೋಸ್ಟ್ ನೋಡಿ ಖುಷಿ ಪಟ್ಟಿದ್ದಾರೆ.

ಬೂಮ್ರಾ ಅವರ ಮದುವೆ ಸಮಾರಂಭದಲ್ಲಿ ಭಾಗಿಯಾದ ಅತಿಥಿಗಳಿಗೆ ಮೊಬೈಲ್ ಬಳಸದಂತೆ ನಿಷೇಧಿಸಲಾಗಿತ್ತು. ಕೊರೊನಾದಿಂದಾಗಿ ಮದುವೆ ಸಮಾರಂಭದಲ್ಲಿ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *