ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಲಸಮಾಧಿಯಾದ 7 ಮಂದಿಗೆ ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಯಿಂದ ಒಟ್ಟು 22 ಲಕ್ಷ ರೂ. ಪರಿಹಾರ ಒದಗಿಸಲು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜೂನ್ 14 ರಂದು ಜಲಸಮಾಧಿಯಾದ 7 ಮಂದಿಗೆ ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ಯಿಂದ ಒಟ್ಟು 22 ಲಕ್ಷ ರೂ. ಪರಿಹಾರ ಒದಗಿಸಲು ಸೂಚಿಸಿದ್ದಾರೆ.
Advertisement
Advertisement
ನಾಗಮಂಗಲ ತಾಲೂಕು ಬೀರನಹಳ್ಳಿಯ ಶ್ರೀಮತಿ ಗೀತಾ, ಸವಿತಾ ಹಾಗೂ ಸೌಮ್ಯ ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇದೇ ತಾಲೂಕಿನ ಚೋಳಸಂದ್ರದ ರಶ್ಮಿ ಮತ್ತು ಇಂಚರಾ, ಕೆ.ಆರ್.ಪೇಟೆ ತಾಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರಿಗೆ ತಲಾ 2 ಲಕ್ಷ ರೂ.ಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರನಹಳ್ಳಿಯ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೀರು ಪಾಲಾಗಿದ್ದರು. ಬೀರನಹಳ್ಳಿಯ ಗೀತಾ(40), ಮಕ್ಕಳಾದ ಸವಿತಾ(19) ಹಾಗೂ ಸೌಮ್ಯ(14) ಮೃತ ದುರ್ದೈವಿಗಳು. ಕೆರೆ ಬಳಿ ಭಾನುವಾರ ಯಾರೂ ಇಲ್ಲದೇ ಇದ್ದಾಗ ಈ ಘಟನೆ ನಡೆದಿದೆ. ಬಟ್ಟೆ ತೊಳೆಯಲು ಹೋಗಿದ್ದ ಮೂವರಲ್ಲಿ ಒಬ್ಬರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋಗಿ ಮತ್ತಿಬ್ಬರ ಸಾವನ್ನಪ್ಪಿದ್ದರು.
Advertisement
2/2
ಶ್ರೀಮತಿ ಗೀತಾ, ಕು ಸವಿತಾ ಹಾಗೂ ಕು ಸೌಮ್ಯ ಅವರಿಗೆ ತಲಾ 5 ಲಕ್ಷ ರೂ., ಇದೇ ತಾಲೂಕಿನ ಚೋಳಸಂದ್ರದ ಕು ರಶ್ಮಿ ಮತ್ತು ಕು ಇಂಚರಾ, ಕೆ ಆರ್ ಪೇಟೆ ತಾಲ್ಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರಿಗೆ ತಲಾ 2 ಲಕ್ಷ ರೂಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
— CM of Karnataka (@CMofKarnataka) June 15, 2020