ಇಸ್ಲಾಮಾಬಾದ್: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ್ದ 11 ಭಾರತೀಯ ಮೀನುಗಾರರನ್ನು ಬಂಧಿಸಿರುವ ಘಟನೆ ನಡೆದಿದೆ.
ಸಮುದ್ರದ ಗಡಿ ನಿಯಮವನ್ನು ಉಲ್ಲಂಘಿಸಿ ಪಾಕಿಸ್ತಾನ ಜಲ ಪ್ರದೇಶ ಪ್ರವೇಶಿಸಿದ ಎರಡು ಬೋಟ್‍ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿದ್ದ 11 ಮೀನುಗಾರರನ್ನು ಪ್ರಾಥಮಿಕ ವಿಚಾರಣೆ ಬಳಿಕ ಡಾಕ್ಸ್ ಪೊಲೀಸ್ ಕರಾಚಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ಕಡಲ ಭದ್ರತಾ ಪಡೆ (ಪಿಎಂಎಸ್) ಪ್ರಕಟಣೆಯಲ್ಲಿ ತಿಳಿಸಿದೆ.
ಹಡಗುಗಳು, ವಿಮಾನಗಳು ಮತ್ತು ವೇಗದ ದೋಣಿಗಳು ನಿಯಮಿತವಾಗಿ ಕಡಲ ವಲಯದಲ್ಲಿ ಗಸ್ತು ಮತ್ತು ಮೇಲ್ವಿಚಾರಣೆಯನ್ನು ಕೈಗೊಳ್ಳುತ್ತೇವೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದ ನೀರಿನಲ್ಲಿ ಹಲವಾರು ಅನಗತ್ಯ ಒಳನುಗ್ಗುವಿಕೆಗಳನ್ನು ಗಮನಿಸಲಾಗಿದೆ ಎಂದು ಪಿಎಂಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಅರೇಬಿಯನ್ ಸಮುದ್ರದಲ್ಲಿ ಕಡಲ ಗಡಿಯನ್ನು ಸ್ಪಷ್ಟವಾಗಿ ಗುರುತಿಸದ ಕಾರಣ ಮೀನುಗಾರರು ಬರುತ್ತಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಆಗಾಗ್ಗೆ ಮೀನುಗಾರರನ್ನು ಬಂಧಿಸುತ್ತಿವೆ. ಮೀನುಗಾರರಿಗೆ ತಮ್ಮ ನಿಖರವಾದ ಸ್ಥಳವನ್ನು ತಿಳಿಯಲು ತಂತ್ರಜ್ಞಾನವನ್ನು ಹೊಂದಿದ ದೋಣಿಗಳಿಲ್ಲ.