– 3 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ
ಬೆಂಗಳೂರು: ಚೆನ್ನೈ ಮತ್ತು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಮಾದಕ ವಸ್ತು ಅರ್ಡರ್ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಭಾರತೀಯ ಮೂಲದ ಮಲೇಷಿಯನ್ ಪ್ರಜೆಯ ಕವಿ ಕುಮಾರ್ (25) ಬಂಧಿತ ಆರೋಪಿಯಾಗಿದ್ದು, ಜರ್ಮನಿಯಿಂದ ಮಾದಕ ವಸ್ತು ಎಂಡಿಎಂಎ ಆರ್ಡರ್ ಮಾಡಿದ್ದ. ಕವಿ ಕುಮಾರ್ ತಾನು ವಾಸಿಸುತ್ತಿದ್ದ ಚೆನ್ನೈ ವಿಳಾಸಕ್ಕೆ ಮಾದಕ ವಸ್ತುಗಳನ್ನು ಅರ್ಡರ್ ಮಾಡಿದ್ದು, ಅಲ್ಲಿಗೆ ಮಾತ್ರೆಗಳಿದ್ದ ಪಾರ್ಸಲ್ ಬಂದಿತ್ತು. ಆದರೆ ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಏರ್ ಪೋರ್ಟಿನಲ್ಲಿ ಪಾರ್ಸಲನ್ನು ಜಪ್ತಿ ಮಾಡಿದ್ದರು.
Advertisement
Advertisement
ಪಾರ್ಸಲ್ ಬಂದಿದ್ದ ವಿಳಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳಿಗೆ ಆರೋಪಿ ಕವಿ ಕುಮಾರ್ ಬೆಂಗಳೂರಿನಲ್ಲಿರುವ ಮಾಹಿತಿ ಲಭಿಸಿತ್ತು. ಬೆಂಗಳೂರಿನ ಅಮೆಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿದ್ದ ಕವಿ ಕುಮಾರ್ ಜರ್ಮನಿಯಿಂದ ಮಾದಕ ವಸ್ತು ಎಂಡಿಎಂಎ ಆರ್ಡರ್ ಮಾಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ಆರೋಪಿಗೆ ಚೆನ್ನೈಗೆ ತೆರಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಕೋರಮಂಗಲದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದ.
Advertisement
ಆರೋಪಿ ಕವಿ ಕುಮಾರ್ ಬೆಂಗಳೂರಿನಲ್ಲಿ ಇರುವುದು ಖಚಿತ ಪಡಿಸಿಕೊಂಡ ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದರು. ಅಲ್ಲದೇ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅರ್ಡರ್ ಮಾಡಿದ್ದ ಸುಮಾರು 3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ಕಸ್ಟಮ್ಸ್ ಅಧಿಕಾರಿಗಲು ವಶಪಡಿಸಿಕೊಂಡಿದ್ದಾರೆ.