ಜಮ್ಮು ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಕೆ

Public TV
1 Min Read
jammu air force station

– ಆ್ಯಂಟಿ ಡ್ರೋನ್ ಗನ್‍ಗಳನ್ನೂ ಅಳವಡಿಸಿದ ಸೇನೆ

ಶ್ರೀನಗರ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಭಾರತೀಯ ವಾಯು ಸೇನೆ ಎಚ್ಚೆತ್ತುಕೊಂಡಿದ್ದು, ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.

jammu air force station 2 medium

ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ)ಯಿಂದ ಜಮ್ಮು ವಾಯು ನೆಲೆಗೆ ಆ್ಯಂಟಿ ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಮತ್ತೊಂದು ಡ್ರೋನ್ ದಾಳಿ ಬೆದರಿಕೆ ಹಿನ್ನೆಲೆ ಆ್ಯಂಟಿ ಡ್ರೀನ್ ಸಿಸ್ಟಮ್ ಅಳವಡಿಸಲಾಗಿದೆ. ರೇಡಿಯೋ ಫ್ರಿಕ್ವೆನ್ಸಿ ಡಿಟೆಕ್ಟರ್ ಹಾಗೂ ಸಾಫ್ಟ್ ಜಾಮರ್‍ಗಳನ್ನು ವಾಯು ನೆಲೆಯಲ್ಲಿ ಅಳವಡಿಸಲಾಗಿದೆ. ಆ್ಯಂಟಿ ಡ್ರೋನ್ ಗನ್‍ಗಳನ್ನು ಸಹ ಹಾಕಲಾಗಿದೆ ಎಂದು ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆವರದಿ ಮಾಡಿದೆ. ಇದನ್ನೂ ಓದಿ: ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

ಜೂನ್ 27ರಂದು ಜಮ್ಮು ವಾಯು ನೆಲೆ ಮೇಲೆ ನಡೆದ ಡ್ರೋನ್ ದಾಳಿಯಿಂದ ಭದ್ರತಾ ಸಿಬ್ಬಂದಿ ಫುಲ್ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹದ್ದಿನ ಕಣ್ಣು ಇರಿಸಿದ್ದಾರೆ. ಇದನ್ನೂ ಓದಿ: ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್

jammu air force base 2 e1624773465447

ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ 27ರಂದು ಬೆಳಗಿನಜಾವ ಡ್ರೋನ್ ದಾಳಿ ನಡೆದಿತ್ತು. ನಸುಕಿನ ವೇಳೆಯಲ್ಲಿ ಜಮ್ಮು ವಾಯು ನೆಲೆಯ ಮೇಲೆ ಎರಡು ಡ್ರೋನ್ ಮೂಲಕ ಸ್ಫೋಟಕವನ್ನು ಸ್ಫೋಟಿಸಲಾಗಿತ್ತು. ಟೆಕ್ನಿಕಲ್ ಪ್ರದೇಶದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಬೆಳಗ್ಗೆ 1:45ಕ್ಕೆ ಮೊದಲ ಸ್ಫೋಟ ಸಂಭವಿಸಿತ್ತು. ಈ ಸ್ಫೋಟ ಸಂಭವಿಸಿದ 5 ನಿಮಿಷದಲ್ಲಿ ತೆರೆದ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಮೇಲ್ಭಾಗ ಒಡೆದು ಹೋಗಿತ್ತು. ಅಲ್ಲದೆ ಸ್ಫೋಟದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿತ್ತು. ಇದು ಪಾಕಿಸ್ತಾನ ಮೂಲದ ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.

jammu air force base 1 medium

Share This Article
Leave a Comment

Leave a Reply

Your email address will not be published. Required fields are marked *