ಶ್ರೀನಗರ: ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ಮತ್ತು ಲಷ್ಕತ್-ಎ-ತೈಬಾ(ಎಲ್‍ಇಟಿ)ಕಮಾಂಡರ್ ನದೀಮ್ ಅಬ್ರಾರ್ ನಗರದ ಪರಿಂಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಂಗಳವಾರ ಬೆಳಗ್ಗೆ ಸಾವನ್ನಪಿದ್ದಾರೆ.
ಭದ್ರತಾ ಪಡೆಗಳ ಹಾಗೂ ಹಲವಾರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಅಬ್ರಾರ್‍ರನ್ನು ಪೊಲೀಸರು ನಿನ್ನೆ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದರು. ವಿಚಾರಣೆಯಲ್ಲಿ ಅಬ್ರಾರ್ ತನ್ನ ಮನೆಯಲ್ಲಿ ಎಕೆ47 ರೈಫಲ್ ನನ್ನು ಮನೆಯಲ್ಲಿ ಇಟ್ಟುಕೊಂಡಿರುವ ವಿಚಾರ ಬಹಿರಂಗ ಪಡಿಸಿದ್ದಾನೆ.
ಪರಿಶೀಲನೆ ನಡೆಸಿ ಎಕೆ47 ರೈಫಲ್‍ನನ್ನು ವಶಪಡಿಸಿಕೊಳ್ಳಲು ಪೊಲೀಸರು ಹೋದಾಗ, ಮನೆಯಲ್ಲಿ ಅಡವಿಕೊಂಡಿದ್ದ ಆರೋಪಿಯ ಸಹಚರರಿಬ್ಬರು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮನೆಯಲ್ಲಿದ್ದ ಭಯೋತ್ಪಾದಕರು ಮತ್ತು ಅಬ್ರಾರ್‍ರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ನಂತರ ಎಕೆ 47 ರೈಫಲ್‍ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
#SrinagarEncounterUpdate: 01 Pakistani #terrorist & top commander LeT Abrar killed. #Incriminating materials alongwith arms & ammunition recovered. #Search going on. Further details shall follow. @JmuKmrPolice https://t.co/6PHd0F9Xae
— Kashmir Zone Police (@KashmirPolice) June 29, 2021
ಘಟನೆ ವೇಳೆ ಮೂವರು ಸಿಆರ್‍ಎಫ್ ಸಿಬ್ಬಂದಿ- ಸಹಾಯಕ ಕಮಾಂಡೆಂಟ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಮತ್ತು ಕಾನ್ಸ್‍ಟೇಬಲ್ ಕೂಡ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಬೇಡಿಕೆ ಭಾರೀ ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಬೇಕಿದೆ?