ಜಮೈಕಾ: ಕೊರೊನಾದಿಂದಾಗಿ ಸಾಕಷ್ಟು ತೊಂದರೆಗೊಳಗಾಗಿದ್ದ ಜಮೈಕಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರಾದ ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಅವರು ಮೋದಿಗೆ ವೀಡಿಯೋ ಮೂಲಕ ಧನ್ಯವಾದ ಸಮರ್ಪಿಸಿದ್ದಾರೆ.
Legendary Jamaican & WI Cricketer @henrygayle thanks PM @narendramodi, the People and Government of #India for the gift of #MadeInIndia Vaccine to #Jamaica#VaccineMaitri @PMOIndia @DrSJaishankar @MEAIndia @IndianDiplomacy pic.twitter.com/fLBbhF5zTY
— India in Jamaica (@hcikingston) March 19, 2021
Advertisement
ಜಮೈಕಾಗೆ ಭಾರತ ಸರ್ಕಾರ 50,000 ಡೋಸ್ ಕೋವಿಡ್ ಲಸಿಕೆಯನ್ನು ನೀಡಿತ್ತು. ಇದನ್ನು ಕಂಡು ಸಂತೋಷಗೊಂಡಿರುವ ವೆಸ್ಟ್ ಇಂಡೀಸ್‍ನ ಇಬ್ಬರು ಸ್ಫೋಟಕ ಆಟಗಾರರಾದ ಗೇಲ್ ಮತ್ತು ರಸೆಲ್ ವೀಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
Advertisement
The Universe Boss!@henrygayle called on High Commissioner Shri R. Masakui at @hcikingston today.
He thanked #India for gifting the #COVID19 Vaccines to #Jamaica and shared how much he loves being in India.@hcikingston wishes Chris Gayle all the very best for @IPL 2021. pic.twitter.com/mTdleh6lxi
— India in Jamaica (@hcikingston) March 18, 2021
Advertisement
ಪ್ರಧಾನಿ ಮೋದಿ, ಭಾರತ ಸರ್ಕಾರ ಮತ್ತು ಭಾರತೀಯರಿಗೆ, ಜಮೈಕಾಗೆ ಕೋವಿಡ್ ಲಸಿಕೆ ನೀಡಿರುವುದಕ್ಕೆ ನಾನು ಧನ್ಯವಾದ ಸಮರ್ಪಿಸಲು ಇಚ್ಛಿಸುತ್ತೇನೆ. ಎಂದು ಹೇಳಿಕೊಂಡಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Advertisement
'I want to say a big thank you to PM @narendramodi & @hcikingston. The #COVID19 Vaccines are here & we are excited.' @PMOIndia
'#India & #Jamaica – We are more than close, we are now brothers'.
WI Cricketer Andre Russell praises #VaccineMaitri @Russell12A @DrSJaishankar pic.twitter.com/LhGi5OQeED
— India in Jamaica (@hcikingston) March 16, 2021
ಈ ಮೊದಲು ವೆಸ್ಟ್ ಇಂಡೀಸ್ ಕ್ರಿಕೆಟ್‍ನ ಇನ್ನೋರ್ವ ಸ್ಟಾರ್ ಆಟಗಾರ ಆ್ಯಂಡ್ರೆ ರಸೆಲ್ ಟ್ವಿಟ್ಟರ್ ನಲ್ಲಿ ವೀಡಿಯೋ ಹಾಕಿಕೊಂಡು ಧನ್ಯವಾದ ತಿಳಿಸಿದ್ದರು. ನಾನು ಪ್ರಧಾನಿ ಮೋದಿ ಮತ್ತು ಭಾರತದ ಹೈ ಕಮಿಷನ್‍ಗೆ ಧನ್ಯವಾದ ಸಲ್ಲಿಸುತ್ತಿದ್ದು, ನೀವು ಕಲುಹಿಸಿದ ವ್ಯಾಕ್ಸಿನ್ ನಮಗೆ ತಲುಪಿದೆ. ಇದರಿಂದ ನಾನು ಉತ್ಸಹ ಭರಿತನಾಗಿದ್ದು ವಿಶ್ವ ಮೊದಲಿನಂತೆ ಕೊರೊನಾ ಮುಕ್ತವಾಗುದನ್ನು ನೋಡಲು ಬಯಸುತ್ತೇನೆ. ಜಮೈಕಾದ ಜನರು ಕೂಡ ವ್ಯಾಕಿನ್‍ನ್ನು ಸ್ವಾಗತಿಸಿದ್ದು, ಈ ಮೂಲಕ ಭಾರತ ಜಮೈಕಾಗೆ ಇನ್ನು ಹತ್ತಿರವಾಗಿದೆ. ಭಾರತ ಹಾಗೂ ಜಮೈಕಾ ಸಹೋದರ ಸಂಬಂಧವನ್ನು ಬೆಳೆಸಿದಂತಾಗಿದೆ ಎಂದಿದ್ದರು.