ಬೆಂಗಳೂರು: ಬಡ ಜನರನ್ನು ವಂಚಿಸಿದ್ದ, `ಐ ಮಾನಿಟರಿ ಅಡ್ವೈಸರಿ’ ಅರ್ಥಾಥ್ 400 ಕೋಟಿ ಐಎಂಎ ಹಗರಣದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‍ಗೆ ಬಂಧನ ಭೀತಿ ಎದುರಾಗಿದೆ.
ಐಎಂಎ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ಜೊತೆಗಿನ ಡೀಲ್ ಸಂಬಂಧ ಜಮೀರ್ ಜೊತೆಗೆ ರೋಷನ್ ಬೇಗ್‍ಗೂ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ಕೊಟ್ಟಿದೆ.
Advertisement
Advertisement
ಇಡಿ ಅಧಿಕಾರಿಗಳ ತಂಡ ಇವತ್ತು ಬೆಳ್ಳಂಬೆಳಗ್ಗೆ ಬೆಂಗಳೂರು, ಮುಂಬೈ, ದೆಹಲಿಯ 6 ಕಡೆ ಏಕಕಾಲಕ್ಕೆ ರೇಡ್ ಮಾಡಿದೆ. ದಾಳಿ ವೇಳೆ ಮನೆಯಲ್ಲೇ ಜಮೀರ್, ಮಗ ಝಯ್ಯದ್ ಸೇರಿದಂತೆ ಕುಟುಂಬಸ್ಥರು ಇದ್ದರು. ಇವರೆಲ್ಲರ ಸಮ್ಮುಖದಲ್ಲೇ ಇಡಿ ಅಧಿಕಾರಿಗಳ ತಂಡ, ಜಮೀರ್ ಸಂಪಾದನೆ-ಆಸ್ತಿ-ವ್ಯವಹಾರದ ದಾಖಲೆಗಳನ್ನ ಜಾಲಾಡಿದ್ದಾರೆ. ಇದನ್ನೂ ಓದಿ: ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!
Advertisement
ಜೊತೆಗೆ, ಜಮೀರ್ ಸಹೋದರ ಮುಜಾಮಿಲ್ ಅಹ್ಮದ್ ಖಾನ್‍ನನ್ನು ವಶಕ್ಕೆ ಪಡೆದಿದೆ. ಆದರೂ, ಮುಜಾಮಿಲ್ ಮಾತ್ರ `ಗೆಲುವಿನ’ ಸಂಕೇತ ತೋರಿಸಿದ್ದಾರೆ.
Advertisement
ಎಲ್ಲೆಲ್ಲಿ ದಾಳಿ?
ಬಂಬೂ ಬಜಾರ್ ನಲ್ಲಿರುವ ಜಮೀರ್ ನಿವಾಸ, ಸದಾಶಿವನಗರದಲ್ಲಿರುವ ಜಮೀರ್ ಅತಿಥಿಗೃಹ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿ ಫ್ಲ್ಯಾಟ್, ಮುಂಬೈ-ದೆಹಲಿಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಗೋರಿಪಾಳ್ಯದಲ್ಲಿರುವ ಜಮೀರ್ ಆಪ್ತ ಅಲ್ತಾಫ್ ಮನೆ ಮೇಲೆ ದಾಳಿ ನಡೆದಿದೆ.
ದಾಳಿ ಯಾಕೆ?
ಜಮೀರ್ ಅವರ ಆರ್ಥಿಕ ವ್ಯವಹಾರದ ಮೇಲೆ ಇಡಿ 8 ತಿಂಗಳಿಂದಲೂ ನಿಗಾ ಇಟ್ಟಿತ್ತು. ಐಷಾರಾಮಿ ಮನೆ, ಮಗಳ ವೈಭವೋಪೇತ ಮದುವೆಗಳು, ವಿದೇಶಗಳಲ್ಲಿ ಕ್ಯಾಸಿನೋ ಬಾರ್ ವ್ಯವಹಾರದಲ್ಲಿ ಕೊಡ್ತಿದ್ದ ಕೊಡ್ತಿದ್ದ ಲೆಕ್ಕಕ್ಕೆ ತಾಳೆ ಆಗುತ್ತಿರಲಿಲ್ಲ. ಇದರ ಜೊತೆಗೆ 10 ವರ್ಷದಲ್ಲಿ ಜಮೀರ್ ಆಸ್ತಿ ಭಾರೀ ಏರಿಕೆಯಾಗಿದೆ.
ಆದಾಯ ಎಷ್ಟು?
2008 – 52 ಲಕ್ಷ ರೂ.
2009 – 44 ಲಕ್ಷ ರೂ.
2013 – 9.45 ಕೋಟಿ ರೂ.
2018 – 44 ಕೋಟಿ ರೂ.
ಆಸ್ತಿ ಎಷ್ಟಿದೆ?
– ಸದಾಶಿವನಗರದಲ್ಲಿ 2 ಕೋಟಿ ರೂ. ಮೌಲ್ಯದ ಮನೆ
– 37 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ
– 9.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ
– 51 ಲಕ್ಷ ರೂ. ಮೌಲ್ಯದ ವಾಹನಗಳು
– 49 ಲಕ್ಷ ರೂ. ಮೌಲ್ಯದ ಮರ್ಸಿಡೀಜ್ ಬೆನ್ಜ್ ಕಾರು
– 20 ಕೋಟಿ ರೂ. ಸಾಲ ಪಡೆದಿರುವ ಮಾಹಿತಿ
– 2016-17ರಲ್ಲಿ 25.65 ಲಕ್ಷ ರೂ. ತೆರಿಗೆ ಪಾವತಿ