– ಕಾನೂನು ಹೋರಾಟದ ಎಚ್ಚರಿಕೆ
ಬೆಂಗಳೂರು: ಮಾತಿನ ಬರದಲ್ಲಿ ಕ್ಷೌರಿಕ ಸಮುದಾಯದವರನ್ನು ಹಜಾಮರು ಎಂದು ಹೇಳಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಅವಮಾನಿಸಿದ್ದಾರೆ. ಸಚಿವರ ಈ ಹೇಳಿಕೆ ಖಂಡನೀಯ ಎಂದು ರಾಜ್ಯ ಸವಿತಾ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.
ಜೂನ್ 9ರಂದು, ಚಾಮರಾಜಪೇಟೆಯಲ್ಲಿ ಸರ್ವಧರ್ಮ ಸಮ್ಮೇಳನದ ಬಹಿರಂಗ ಕಾರ್ಯಕ್ರಮದಲ್ಲಿ, ವಿವಿಧ ಸಮುದಾಯಗಳಿಗೆ ಪರಿಹಾರ ಘೋಷಣೆಯ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಮಾತಿನ ಬರದಲ್ಲಿ ಜಮೀರ್ ಅಹ್ಮದ್ ಕ್ಷೌರಿಕ ಸಮುದಾಯವನ್ನ ಹಜಾಮರು ಎಂಬ ಪದ ಬಳಕೆ ಮಾಡಿದ್ದರು. ಇದನ್ನೂ ಓದಿ: ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ
ಜಮೀರ್ ಹೇಳಿಕೆಯಿಂದ ನಮ್ಮ ಸಮಾಜಕ್ಕೆ ಅವಮಾನವಾಗಿದೆ. ಇದನ್ನು ನಮ್ಮ ಕರ್ನಾಟಕ ರಾಜ್ಯ ಸವಿತಾ ಸಮಾಜ ಖಂಡಿಸುತ್ತದೆ. ಕೂಡಲೇ ನಿಮ್ಮ ಹೇಳಿಕೆಯನ್ನು ಹಿಂಪಡೆದು, ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನಿನ ಹೋರಾಟಕ್ಕೆ ನಮ್ಮ ಸಮಾಜ ಮುಂದಾಗಲಿದೆ ಎಂದು ರಾಜ್ಯ ಸವಿತಾ ಸಮಾಜ ಜಮೀರ್ ಅವರಿಗೆ ಎಚ್ಚರಿಕೆ ನೀಡಿದೆ.