ಚಿಕ್ಕಬಳ್ಳಾಪುರ: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್‍ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಅಭಿಮಾನಿಯೋರ್ವ ಸಿಹಿಮುತ್ತು ಕೊಟ್ಟು ಸಂಭ್ರಮ ಪಟ್ಟಿದ್ದಾನೆ.
ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ ವೆಂಕಟರಮಣಯ್ಯ ಕೊರೊನಾ ಸಂಕಷ್ಟ, ಲಾಕ್‍ಡೌನ್ ಸಮಯದಲ್ಲಿ ಬಡವರ ಹಸಿವು ನೀಗಿಸುವ ಸಲುವಾಗಿ ಅನ್ನ ದಾಸೋಹ ಮಾಡುತ್ತಿದ್ದಾರೆ. ಈ ಅನ್ನ ದಾಸೋಹ ವೀಕ್ಷಣೆ ಮಾಡಲು ಜಮೀರ್ ಅಹ್ಮದ್ ದೊಡ್ಡಬಳ್ಳಾಪುರಕ್ಕೆ ಆಗಮಿಸಿದರು. ಈ ಸಮಯದಲ್ಲಿ ಜಮೀರ್ ಅಹ್ಮದ್ ಅವರನ್ನು ನೋಡಿದ ಖುಷಿಗೆ ಅಭಿಮಾನಿಯೋರ್ವ ಸಿಹಿ ಮುತ್ತು ನೀಡಿದ್ದಾನೆ. ಇದನ್ನೂ ಓದಿ:ಜಮೀರ್ ಅಹ್ಮದ್ ವಿರುದ್ಧ ಸವಿತಾ ಸಮಾಜ ಆಕ್ರೋಶ
ಅನ್ನದಾಸೋಹ ವೀಕ್ಷಣೆಯ ಸಮಯದಲ್ಲಿ ಕಾರಿನ ಮೇಲೆ ಜಮೀರ್ ಅಹ್ಮದ್ ಅವರ ಭಾವಚಿತ್ರ ಅಳವಡಿಸಿರುವುದು ಜಮೀರ್ ರವರ ಕಣ್ಣಿಗೆ ಬಿದ್ದಿದೆ, ತಮ್ಮ ಭಾವಚಿತ್ರ ನೋಡಿ ಕಾರಿನಿಂದ ಕೆಳಗಿಳಿದು ಬಂದು ಕಾರಿನ ಚಾಲಕನನ್ನು ಮಾತನಾಡಿದ್ದಾರೆ. ಈ ವೇಳೆ ಜಮೀರ್ ಅವರ ಕೆನ್ನೆಗೆ ಮುತ್ತು ಕೊಟ್ಟು ತನ್ನ ಅಭಿಮಾನ ತೋರಿಸಿದ್ದಾನೆ, ಜಮೀರ್ ಅವರು ಬಂದ ಕಡೆಯಲ್ಲೆಲ್ಲಾ ಅಭಿಮಾನಿಗಳು ಸುತ್ತುವರೆದು ಸೆಲ್ಫಿ, ಫೋಟೋ ತೆಗೆಸಿಕೊಂಡು ಸಂಭ್ರಮಪಡುತ್ತಿದ್ದಾರೆ.