ಶಿವಮೊಗ್ಗ: ಮಾಜಿ ಸಚಿವ ರೋಷನ್ ಬೇಗ್ ಹಾಗೂ ಜಮೀರ್ ಅಹಮ್ಮದ್ ಅವರು ಮುಸಲ್ಮಾನರನ್ನು ಉದ್ಧಾರ ಮಾಡುತ್ತೇವೆ ಎಂದು ಐಎಂಎ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಬಡ ಮುಸಲ್ಮಾನರ ದುಡ್ಡು ಹೊಡೆದಿದ್ದಾರೆ. ಹೀಗಾಗಿ ಇಬ್ಬರಿಗೂ ಬಡವರ ಶಾಪ ತಟ್ಟಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
Advertisement
ಈ ಕುರಿತು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಟಕಾಬಂಡಿ ಹೊಡೆಯುವವರು, ಹಳೆ ಪೇಪರ್, ಖಾಲಿ ಬಾಟಲಿ ಮಾರುವವರು, ಮುಸಲ್ಮಾನ್ ಚಾಲಕ, ನಿರ್ವಾಹಕರ ಹಣ ಹೊಡೆದಿದ್ದಾರೆ. ಕೋಟ್ಯಂತರ ರೂ. ಹಣ ಲೂಟಿ ಹೊಡೆದ ಮೇಲೆ ತನಿಖೆ ಆರಂಭವಾಗಿದೆ. ತನಿಖೆ ಆರಂಭದ ನಂತರ ಒಬ್ಬೊಬ್ಬರೇ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ ಎಂದರು. ಇದನ್ನೂ ಓದಿ: ಜಮೀರ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಡಿ.ಕೆ.ಸುರೇಶ್
Advertisement
Advertisement
ರೋಷನ್ ಬೇಗ್ ಲೂಟಿಕೋರ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿಯೇ ಬಿಜೆಪಿ ಪಕ್ಷಕ್ಕೆ ಅವರನ್ನು ಸೇರಿಸಿಕೊಳ್ಳಲಿಲ್ಲ. ಬಡ ಮುಸಲ್ಮಾನರ ಹಣ ತಿಂದಿಲ್ಲ ಎಂದು ಇವರಿಬ್ಬರೂ ಸಾಬೀತು ಮಾಡಲಿ. ಬಡವರ ಹಣ ತಿಂದಿದ್ದಕ್ಕೆ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ತನಿಖೆ ನಂತರ ಸತ್ಯ ಬಹಿರಂಗಗೊಳ್ಳಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಇದನ್ನೂ ಓದಿ: ಜಮೀರ್ ಆದಾಯ 10 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?