ಶಿವಮೊಗ್ಗ: ಜಮೀನು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಹಾಡಹಗಲೇ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ತಿಮ್ಲಾಪುರ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ
ಶಿವಲಿಂಗಪ್ಪ (45) ಮೃತನಾಗಿದ್ದಾನೆ. ಕೊಲೆಯಾದ ಶಿವಲಿಂಗಪ್ಪ ಅವರ ಮಾವ ಹೊನ್ನಪ್ಪ ಅವರಿಗೆ ಒಂದು ಎಕರೆ ಜಮೀನು ಇತ್ತು. ಈ ಜಮೀನಿಗೆ ಸಂಬಂಧಪಟ್ಟಂತೆ ಹೊನ್ನಪ್ಪ ಹಾಗೂ ಸೋಮಶೇಖರ್, ಆನಂದಕುಮಾರ್ ನಡುವೆ ಆಗಾಗ ಜಗಳ ನಡೆಯುತಿತ್ತು ಎನ್ನಲಾಗಿದೆ. ಇದನ್ನೂ ಓದಿ: ಅನ್ನದಾತನ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಪ್ರಥಮಾದ್ಯತೆ: ಬಿಎಸ್‍ವೈ
ಜಮೀನಿನ ವಿವಾದ ಬಗೆಹರಿದು ಹೊನ್ನಪ್ಪ ಸಾಗುವಳಿ ಮಾಡುತ್ತಿದ್ದರು. ಆದರೂ ಈ ಜಮೀನಿನಿಂದ ಹೊನ್ನಪ್ಪ ಅವರನ್ನು ಒಕ್ಕಲೆಬ್ಬಿಸಬೇಕು ಎಂಬ ಉದ್ದೇಶದಿಂದ ಸೋಮಶೇಖರ್ ಮತ್ತು ಆನಂದಕುಮಾರ್ ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಹಿಗಾಗಿಯೇ ಇದೇ ವಿಚಾರಕ್ಕೆ ಸೋಮಶೇಖರ್ ಹಾಗೂ ಆನಂದಕುಮಾರ್ ಸೇರಿಕೊಂಡು ಶಿವಲಿಂಗಪ್ಪ ಅವರನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಶಿವಲಿಂಗಪ್ಪ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.