-ಖಾರದ ಪುಡಿ ಎರಚಿ ದೊಣ್ಣೆಯಿಂದ ಹಲ್ಲೆ ಯತ್ನ
ಚಿಕ್ಕಮಗಳೂರು: ಜಮೀನು ವಿಚಾರವಾಗಿ ಒಂದೇ ಗ್ರಾಮದ ಎರಡು ಕುಟುಂಬಗಳ ಮಧ್ಯೆಯೇ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಜಡಕನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಜಡಕನಕಟ್ಟೆ ಗ್ರಾಮದ ಶಿವಪ್ಪ ಹಾಗೂ ತಿಮ್ಮಪ್ಪ ಎರಡು ಕುಟುಂಬಗಳ ಮಧ್ಯೆ ಈ ಮಾರಾಮಾರಿ ನಡೆದಿದೆ. ಎರಡು ಕುಟುಂಬಗಳು ಖಾರದಪುಡಿ ಎರಚಿ ದೊಣ್ಣೆ ಹಾಗೂ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ಜಮೀನು ನಮ್ಮದು ನಮಗೆ ಸೇರಬೇಕೆಂದು ಎರಡು ಕುಟುಂಬದ ಪುರುಷರು ಹಾಗೂ ಮಹಿಳೆಯರು ಗಲಾಟೆ ಮಾಡಿಕೊಂಡಿದ್ದಾರೆ. ಆದರೆ ಎರಡು ಕುಟುಂಬಗಳು ಜಮೀನಿನ ಮಧ್ಯೆಯೇ ಗಲಾಟೆ ಮಾಡಿಕೊಂಡರು ಪರಸ್ಪರ ಒಬ್ಬರ ಮೈ-ಕೈ ಮತ್ತೊಬ್ಬರು ಮುಟ್ಟಿಲ್ಲ. ಕಡಿಯುತ್ತೇನೆ, ಬಡಿಯುತ್ತೇನೆಂದು ಕೂಗಾಡಿದ್ದಾರೆ.
Advertisement
Advertisement
ಇದು ಪೂರ್ವನಿಯೋಜಿತ ಗಲಾಟೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಜಮೀನಿಗೆ ಬರುವಾಗ ಕೃಷಿ ಸಲಕರಣೆಗಳ ಜೊತೆಗೆ ಮಹಿಳೆಯರು ಪ್ಲಾಸ್ಟಿಕ್ ಕವರ್ ನಲ್ಲಿ ಖಾರದ ಪುಡಿಯನ್ನು ತಂದಿದ್ದಾರೆ. ಗಲಾಟೆ ವೇಳೆ ಜಮೀನಿನಲ್ಲಿ ಒಬ್ಬರಿಗೊಬ್ಬರು ಖಾರದ ಪುಡಿಯನ್ನು ಎರಚಿಕೊಂಡು ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಪ್ಲಾಸ್ಟಿಕ್ ಕವರಿನಲ್ಲಿ ಖಾರದ ಪುಡಿಯನ್ನ ಜಮೀನಿಗೆ ತಂದಿದ್ದನ್ನು ಗಮನಿಸಿದರೆ ಎರಡು ಕುಟುಂಬಗಳು ಗಲಾಟೆ ಮಾಡಲೇಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದರು ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
Advertisement
ಈ ಜಮೀನು ಯಾರಿಗೆ ಸೇರಬೇಕೆಂಬುದು ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ ಒಂದೇ ಗ್ರಾಮದ ಎರಡು ಕುಟುಂಬಗಳು ಹೀಗೆ ಜಮೀನಿಗಾಗಿ ಜಮೀನಿನಲ್ಲೇ ಜಗಳ ಮಾಡಿಕೊಂಡಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Advertisement