ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿಯವರು ಜಮಖಂಡಿಯ ಪ್ರತಿಭಾನ್ವಿತ ರೈತನ ಮಗನ ಓದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಸುಧಾ ಮೂರ್ತಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರವಾಹದಲ್ಲಿ ಸಿಲುಕಿ ನಲುಗಿದ್ದ ಉತ್ತರ ಕರ್ನಾಟಕ ಜನರಿಗೆ ಸಹಾಯ ಮಾಡಿದ್ದರು. ಈಗ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ರೈತನ ಮಗ ಸಂಜು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಪಡೆದುಕೊಂಡಿದ್ದಾನೆ. ಈ ಬಡಬಾಲಕ ಮುಂದಿನ ಮೂರು ವರ್ಷದ ವ್ಯಾಸಂಗದ ಖರ್ಚುನ್ನು ಇನ್ಫೋಸಿಸ್ ಸುಧಾ ಮೂರ್ತಿಯವರು ಭರಿಸಲಿದ್ದಾರೆ. ಜೊತೆಗೆ ಜಮಖಂಡಿಯ ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದ್ದಾರೆ.