ಟೋಕಿಯೋ: ಉತ್ತರ ಜಪಾನಿನ ಬಂದರು ಬಳಿ ಸರಕು ಸಾಗಣೆಯ ಹಡಗು ಇಬ್ಭಾಗವಾಗಿದ್ದು, ಸುಮಾರು 24 ಕಿಲೋ ಮೀಟರ್ ವರೆಗೆ ತೈಲ ವ್ಯಾಪಿಸಿದೆ. ಬುಧವಾರ ಈ ಘಟನೆ ನಡೆದಿದೆ ಎಂದು ಜಪಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಕಿಮ್ಸನ್ ಪೊಲಾರಿಸ್ ಹೆಸರಿನ ಹಡಗು ದಡಕ್ಕೆ ರಭಸವಾಗಿ ತಾಕಿದ್ದರಿಂದ ಹಡಗು ಎರಡು ತುಂಡಾಗಿದೆ. ಬುಧವಾರ ಉತ್ತರ ಜಪಾನಿನ ಹಚಿನೊಹೆ ಬಂದರಿನಲ್ಲಿ ಈ ಅವಘಡ ಸಂಬಂಧಿಸಿದೆ.
Advertisement
Advertisement
39 ಸಾವಿರ ಟನ್ ತೂಕದ ಕಿಮ್ಸನ್ ಪೊಲಾರಿಸ್, ಕಟ್ಟಿಗೆಯ ತುಂಡುಗಳನ್ನ ತೆಗೆದುಕೊಂಡು ಸಾಗುತ್ತಿತ್ತು. ದಡದ ಬಳಿ ಬಂದಾಗ ಸಮುದ್ರ ಆಳ ಕಡಿಮೆ ಇರುವ ಕಾರಣ, ಮುಂಭಾಗ ದಡಕ್ಕೆ ತಾಕಿದ್ದರಿಂದ ಕ್ರ್ಯಾಕ್ ಉಂಟಾಗಿ ಎರಡು ತುಂಡಾಗಿದೆ. ಕೂಡಲೇ ಕೋಸ್ಟಲ್ ಸಿಬ್ಬಂದಿ ಮತ್ತೊಂದು ಹಡಗಿನ ಮೂಲಕ ತೆರಳಿ ಎಲ್ಲ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್
Advertisement
ಅಧಿಕಾರಿಗಳು ತೈಲ ಸೋರಿಕೆ ತಡೆಯಲು ಪ್ರಯತ್ನಿಸಿದ್ರೂ, ಅಪಾರ ಪ್ರಮಾಣದ ಇಂಧನ ಸಮುದ್ರ ಸೇರಿದೆ. ತೈಲ ಸೋರಿಕೆಯಿಂದ ಜಲಚರ ಜೀವಿ ಮತ್ತು ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹಡಗಿನ ಎಲ್ಲ ಸಿಬ್ಬಂದಿ ಚೀನಾ ಮತ್ತು ಫಿಲಿಫೈನ್ಸ್ ಮೂಲದವರು ಎಂದು ವರದಿಯಾಗಿದೆ. ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್