ಶಿವಮೊಗ್ಗ: ಶುಕ್ರವಾರ ಆದೇಶ ಹೊರಡಿಸಿದ್ದ ಸರ್ಕಾರ, ಮಾಸ್ಕ್, ಸಾಮಾಜಿಕ ಅಂತರ ನಿಯಮಗಳನ್ನ ಕಡ್ಡಾಯಗೊಳಿಸಿತ್ತು. ಆದೇಶ ಹೊರಡುತ್ತಿದ್ದಂತೆ ರಸ್ತೆಗಳಿದ ಪೊಲೀಸರು, ಮಾರ್ಷಲ್ ಗಳ ಮಾಸ್ಕ್ ಹಾಕದ ಜನರ ಮೇಲೆ ದಂಡಸ್ತ್ರಾ ಪ್ರಯೋಗಿಸುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನ ಉಲ್ಲಂಘನೆ ಮಾಡಲಾಗಿದೆ.
ಇಂದು ಶಿವಮೊಗ್ಗದ ಹಲವೆಡೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯ್ತು. ಸಚಿವರು ಎಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ ಮತ್ತು ಪ್ರಮುಖವಾಗಿ ಮಾಸ್ಕ್ ಸಹ ಧರಿಸಲಿಲ್ಲ.
ಸರ್ಕಾರದ ನಿಯಮಗಳನ್ನ ಕೇವಲ ಜನಸಾಮಾನ್ಯರು ಪಾಲಿಸಬೇಕಾ? ಸಚಿವರು ಮತ್ತು ಅವರ ಜೊತೆಯಲ್ಲಿದ್ದ ಬೆಂಬಲಿಗರಿಗೆ ದಂಡ ಹಾಕೋರು ಯಾರು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.