ನವದೆಹಲಿ: ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ನಟ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೀರ್ ಖಾನ್ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ಅವರನ್ನು ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ ಎಂದಿದ್ದಾರೆ.
ಭಾರತ- ಪಾಕಿಸ್ತಾನ ವಿಭಜನೆಯ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ವಿಭಜನೆಯ ಸಂದರ್ಭದಲ್ಲಿ ಕಡಿಮೆ ಜನಸಂಖ್ಯೆ ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಹೋಯ್ತು. ಆದರೆ ಈ ವೇಳೆ ಭಾರೀ ಸಂಖ್ಯೆಯ ಜನ ಭಾರತಕ್ಕೆ ಮರಳಿದರು. ಭಾರತದಲ್ಲಿ ಭೂಮಿ ವಿಸ್ತರಣೆಯಾಗಲಿಲ್ಲ. ಆದರೆ ಜನಸಂಖ್ಯೆ ಈಗ 140 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು.
ಜುಲೈ 3 ರಂದು ಅಮೀರ್ ಖಾನ್ ಮತ್ತು ಕಿರಣ್ ರಾವ್ ಹೇಳಿಕೆ ಬಿಡುಗಡೆ ಮಾಡಿ ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ : 2.0 ಸಿನಿಮಾದ ರಜಿನಿ ಪಾತ್ರದ ಆಫರ್ ಮೊದ್ಲು ನನಗೆ ಬಂದಿತ್ತು: ಅಮೀರ್ ಖಾನ್
ಲಗಾನ್ ಚಿತ್ರದ ವೇಳೆ ಅಮೀರ್ ಖಾನ್ ಮತ್ತು ಕಿರಣ್ ರಾವ್ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಡಿಸೆಂಬರ್ 28, 2005ರಂದು ಮದುವೆಯಾಗಿದ್ದ ಜೋಡಿಗೆ ಅಜಾದ್ ಎಂಬ ಗಂಡು ಮಗುವಿದೆ. ಈ ಮೊದಲು ಆಮಿರ್ ಖಾನ್ ರೀನಾ ದತ್ತಾರನ್ನು ಮದುವೆಯಾಗಿದ್ದರು.