ನವದೆಹಲಿ: ಹೊಸ ರೂಪಾಂತರ ಕೊರೊನಾ ವೈರಸ್ ಹಿನ್ನೆಲೆ ರದ್ದುಗೊಂಡಿರುವ ವಿಮಾನಯಾನ ಸಂಚಾರ ಜನವರಿ 8ರಿಂದ ಆರಂಭಗೊಳ್ಳಲಿವೆ. ಹಾಗೆ ಯುಕೆಯಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಿಂದಲೇ ಆರ್.ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
Advertisement
ಮಾರ್ಗಸೂಚಿಗಳು:
1. ಯುಕೆಯಿಂದ ಬರುವ ಪ್ರಯಾಣಿಕರು ತಮ್ಮ ಸ್ವಂತ ಖಚಿನಿಂದಲೇ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್.ಟಿ-ಪಿಸಿಆರ್ ಟೆಸ್ಟ್ ಮಾಡಿಕೊಳ್ಳುವುದು.
2. ಡೈರೋಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಯುಕೆಯ ಎಲಿಜಿಬಲ್ ಏರ್ ಲೈನ್ಸ್ ಕೇವಲ ಕೆಲ ವಿಮಾನಗಳ ಆಗಮನಕ್ಕೆ ಅನುಮತಿ ನೀಡಿದೆ. ಯುಕೆಯಿಂದ ಆಗಮಿಸುವ ವಿಮಾನಗಳ ಸಮಯದ ನಡುವೆ ಅಂತರವಿರಲಿದೆ. ಪ್ರತಿ ಪ್ರಯಾಣಿಕರ ಪರೀಕ್ಷೆ ಮತ್ತು ಜನ ದಟ್ಟಣೆ ತಡೆಯಲಿ ಈ ಪ್ಲಾನ್ ಮಾಡಲಾಗಿದೆ. ಯುಕೆಯಿಂದ ಮತ್ತೊಂದು ದೇಶಕ್ಕೆ ತೆರಳಿ, ಅಲ್ಲಿ ಫ್ಲೈಟ್ ಚೇಂಜ್ ಮಾಡುವ ಪ್ರಯಾಣಿಕರ ಬಗ್ಗೆ ಗಮನದಲ್ಲಿಡಲಾಗುತ್ತದೆ.
Advertisement
Advertisement
3. ಪ್ರತಿ ಪ್ರಯಾಣಿಕರು ತಮ್ಮ 14 ದಿನದ ಟ್ರಾವೆಲ್ ಹಿಸ್ಟರಿಯನ್ನ ನಿಗಿದಿತ ಫಾರಂನಲ್ಲಿ ದಾಖಲಿಸೋದು ಕಡ್ಡಾಯ.
4. ಜನವರಿ 8 ರಿಂದ ಜನವರಿ 30ರೊಳಗೆ ಆಗಮಿಸುವ ಪ್ರಯಾಣಿಕರು ಸೆಲ್ಫ್ ಡಿಕ್ಲೇರೇಷನ್ ಫಾರಂ ಮುಂಚಿತವಾಗಿ ಭರ್ತಿ ಮಾಡಬೇಕು.
5. ಎಲ್ಲ ಪ್ರಯಾಣಿಕರು 72 ಗಂಟೆ ಮುಂಚಿನ ಆರ್.ಟಿ.- ಪಿಸಿಆರ್ ಪರೀಕ್ಷೆಯ ನೆಗೆಟಿವ್ ರಿಪೋಟ್ ತರಬೇಕು.
Advertisement
6. ಪ್ರಯಾಣಿಕರಿಗೆ ವೇಟಿಂಗ್ ರೂಮಿನಲ್ಲಿ ಎಲ್ಲ ನಿಯಮಗಳನ್ನ ಡಿಸ್ ಪ್ಲೇ ಮೂಲಕ ತೋರಿಸಲಾಗುವುದು. ಹಾಗೆ ವಿಮಾನದಲ್ಲಿಯೂ ಮಾಹಿತಿ ನೀಡಲಾಗುವುದು.
7. ವಿಮಾನ ನಿಲ್ದಾಣದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ್ರೆ ಐಸೋಲೇಶನ್ ಗೆ ಒಳಗಾಗೋದು ಕಡ್ಡಾಯ.
8. ಹಳೆಯ ಕೊರೊನಾ ಸೋಂಕು ಪತ್ತೆಯಾದ್ರೆ ಮಾತ್ರ ಹೋಂ ಐಸೋಲೇಷನ್ ಗೆ ಅವಕಾಶ. ರೂಪಾಂತರಿ ವೈರಸ್ ಕಂಡು ಬಂದ್ರೆ ಪ್ರತ್ಯೇಕ ಐಸೋಲೇಷನ್ ಯುನಿಟ್ ಗೆ ಶಿಫ್ಟ್ ಮಾಡಲಾಗುತ್ತದೆ.