-ಬೆಳಗಾವಿಯ ರಾಜಕಾರಣಿಗಳು ಕೋಮಾದಲ್ಲಿದ್ದಾರೆ
-ಕನ್ನಡಪರ ಸಂಘಟನೆಗಳಿಂದ ಕನ್ನಡ ಉಳಿದಿದೆ
– ಬಿಜೆಪಿ ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ
ಚಿಕ್ಕಬಳ್ಳಾಪುರ : ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಹಾಗೂ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಜನವರಿ 30 ರಂದು ರಾಜ್ಯದಲ್ಲಿ ರೈಲು ಬಂದ್ ಮಾಡಿ ಹೋರಾಟ ಮಾಡುವುದಾಗಿ ಕನ್ನಡಪರ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
Advertisement
Advertisement
ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕಪ್ಪುಪಟ್ಟಿ ಧರಿಸಿ ಮಾತನಾಡಿದ ಅವರು, ಬೆಳಗಾವಿ ನಮ್ಮದು-ಕಾರವಾರ ನಮ್ಮದು. ಆದರೆ ಮಹಾರಾಷ್ಟ್ರದ ಶಿವಸೇನೆಯ ಸರ್ಕಾರ ಸಿಎಂ ಉದ್ದವ್ ಠಾಕ್ರೆ ಬೆಳಗಾವಿಯನ್ನೇ ಪಡೆದೇ ಪಡೆಯಬೇಕು ಎಂಬ ಹಠದಲ್ಲಿ ದಾಂಧಲೆ ಮಾಡುತ್ತಿದ್ದಾರೆ. ಅವರಿಗೆ ಎಂಇಎಸ್ ನವರು ಬೆಂಬಲ ಕೊಡುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರ ನಿಷ್ಕ್ರಿಯವಾಗಿದೆ. ಬೆಳಗಾವಿಯ ರಾಜಕಾರಣಿಗಳು ಕೋಮಾದಲ್ಲಿದ್ದಾರೆ. ಅವರಿಗೆ ಯಾರು ಬೇಕಾಗಿಲ್ಲ ಮಂತ್ರಿಯಾಗಬೇಕು ಅಷ್ಟೇ. ಬೆಳಗಾವಿ ರಾಜಕಾರಣಿಗಳು ಮಹಾರಾಷ್ಟ್ರ ಹಾಗೂ ಎಂಇಎಸ್ ಎಜೆಂಟ್ ಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕನ್ನಡ ಉಳಿದಿದ್ದರೇ ಕನ್ನಡಪರ ಸಂಘಟನೆಗಳಿಂದಾಗಿದೆ. ಯಡಿಯೂರಪ್ಪ ಸರ್ಕಾರ ತೀರ ಇತ್ತೀಚೆಗೆ ಬಂದಿರುವ ಎಲ್ಲಾ ಸರ್ಕಾರಗಳಿಗಿಂತಲೂ ಹೀನಾಯ ಸರ್ಕಾರ. ಕನ್ನಡ ವಿರೋಧಿ ಸರ್ಕಾರ. ಕನ್ನಡ ಸಂಘಟನೆಗಳ ವಿರೋಧಿ ಸರ್ಕಾರ. ಬಿಜೆಪಿ ಆರ್ ಎಸ್ ಎಸ್ ಸರ್ಕಾರ. ಇವರಿಗೆ ಹಿಂದಿ ಬಗ್ಗೆ ಅಭಿಮಾನವೇ ಹೊರತು ಕನ್ನಡದ ಬಗ್ಗೆ ಅಲ್ಲ. ಯಡಿಯೂರಪ್ಪನವರು ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಬೇಕು. ಎಂಎಎಸ್ ಸಂಘಟನೆ ನಿಷೇಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.