ಮುಂಬೈ: ಚಾಲಕ ರಹಿತ ಮೆಟ್ರೋ ಸಂಚಾರವನ್ನು ಜನವರಿ 27 ರಿಂದ ಮೊದಲ ಬಾರಿಗೆ ಮುಂಬೈನಲ್ಲಿ ಆರಂಭಿಸಲಾಗುತ್ತಿದೆ ಎಂದು ಅಲ್ಲಿನ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಘೋಷಿಸುವ ಮೂಲಕ ಮುಂಬೈ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸ್ವಯಂ ಚಾಲಿತ ಮೆಟ್ರೋ ಟ್ರೈನ್ ಕಾರ್ಯಚರಣೆ ಪರೀಕ್ಷೆ ನಂತರ ಜನವರಿ 27ರಂದು ಮೊದಲ ಚಾರ್ಕೋಪ್ ಮೆಟ್ರೋ ಕಾರ್ಶೆಡ್‍ಗೆ ತಲುಪಲಿದೆ. ಮತ್ತು ಇನ್ನೂ ಎರಡು ಮೆಟ್ರೋ ಟ್ರೈನ್ ಗಳ ಮಾರ್ಗಗಳನ್ನು ಯೋಜಿಸಿ ಈ ವರ್ಷದ ಮೇ ತಿಂಗಳಿನಿಂದ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಚಾಲಕ ರಹಿತ ಮೆಟ್ರೋ ಟ್ರೈನ್ ಸ್ವಯಂ ಚಲಿಸುವುದರಿಂದ ಮೊದಲ 6 ತಿಂಗಳವರೆಗೂ ಜನರಿಗೆ ಇದು ಸುರಕ್ಷಿತವಲ್ಲ ಎಂದು ಆತಂಕಗೊಳಿಸಬಹುದು. ಆದರೆ ಟ್ರೈನ್ ನನ್ನು ಮೋಟಾರು ಚಾಲಕ ನಿರ್ವಹಿಸುತ್ತಿರುತ್ತಾನೆ. ಅಲ್ಲದೆ ಟ್ರೈನ್ ಸರಿಸುಮಾರು 80 ಕಿಮೀ ವೇಗದಲ್ಲಿ ಮಾತ್ರ ಚಲಿಸುತ್ತದೆ. ಜೊತೆಗೆ ಚಾಲಕ ರಹಿತ ಮೆಟ್ರೋನ ಒಂದು ಕೋಚ್ ನಲ್ಲಿ 50 ಜನ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಟ್ರೈನ್ ನಲ್ಲಿ ಸುಮಾರು 2,280 ಮಂದಿ ಪ್ರಯಾಣಿಸಬಹುದು ಎಂದರು.
ಈ ನೂತನ ಮೆಟ್ರೋ 2ಎ ಟ್ರೈನ್ ದಹಿಸಾರ್ ನಿಂದ ಡಿಎನ್ ನಗರಕ್ಕೆ ಮತ್ತು ಮೆಟ್ರೋ7 ದಹಿಸಾರ್ ನಿಂದ ಅಧೇರಿ ಪೂರ್ವಕ್ಕೆ ಚಲಿಸುತ್ತದೆ. 7 ವರ್ಷಗಳ ನಂತರ ವರ್ಸೋವಾ-ಅಂಧೇರಿ-ಘಾಟ್ಕೋಪರ್‍ವರೆಗೆ 11 ಕಿಮೀ ವರೆಗೂ ಮೊದಲ ಬಾರಿಗೆ ದೇಶದ ವಾಣಿಜ್ಯ ಬಂಡಾಯವು ಮೆಟ್ರೋ ರೈಲನ್ನು ಆರಂಭಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಮೆಟ್ರೋ ಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‍ಡಿಎ) ಅಂತಿಮ ಹಂತದಲ್ಲಿದ್ದು, ಮೆಟ್ರೋ ಮಾರ್ಗಗಳು ಮತ್ತು ಮೆಟ್ರೋ ನಿಲ್ದಾಣಗಳ ನಿರ್ಮಾಣ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು