ಲಕ್ನೋ: ಜನವರಿ 26, 2020ಕ್ಕೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಯ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಡಿಸೆಂಬರ್ 19ರಂದು ಇಂಡೋ-ಇಸ್ಲಾಮಿಕ್ ಕಲ್ಚರ್ ಫೌಂಡೇಶನ್ (ಐಐಸಿಎಫ್) ಮಸೀದಿ ಮತ್ತು ಆಸ್ಪತ್ರೆಯ ನೀಲಿ ನಕ್ಷೆಯನ್ನ ಬಿಡುಗಡೆಗೊಳಿಸಿತ್ತು. ಆದ್ರೆ ನಿರ್ಮಾಣ ಕಾರ್ಯ ಆರಂಭದ ದಿನಾಂಕ ಪ್ರಕಟಿಸಿರಲಿಲ್ಲ. ಅಲಿಗಢ ಮುಸ್ಲಿಂ ಯುನಿವರ್ಸಿಟಿಯ ವಾಸ್ತು ವಿಭಾಗದದ ಡೀನ್ ಎಂ ಎಸ್ ಅಖ್ತರ್ ಅವರು ಮಸೀದಿಯನ್ನು ವಿನ್ಯಾಸಗೊಳಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಉತ್ತರ ಪ್ರದೇಶ ಸರ್ಕಾರ ಮಸೀದಿ ನಿರ್ಮಾಣಕ್ಕೆ ಧನ್ನಿಪುರದಲ್ಲಿ 5 ಎಕರೆ ಜಮೀನು ನೀಡಿದೆ. ಇದೀಗ ಇದೇ ಸ್ಥಳದಲ್ಲಿ ಮಸೀದಿ ಮತ್ತು ಆಸ್ಪತ್ರೆ ನಿರ್ಮಾಣವಾಗಲಿದೆ. ಐಐಸಿಎಫ್ ಪ್ರಧಾನ ಕಾರ್ಯದರ್ಶಿ ಅತ್ಹರ್ ಹುಸೈನ್ ಗಣರಾಜ್ಯೋತ್ಸವ ದಿನದಂದು ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಜನವರಿ 26ರಂದೇ ದೇಶದ ಸಂವಿಧಾನ ರಚನೆ ಆದ ದಿನ. ಇದಕ್ಕಿಂತ ಒಳ್ಳೆಯ ದಿನ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.
ಹೇಗಿರಲಿದೆ ಮಸೀದಿ?:
ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿಗೆ ಗುಂಬಜ್ ಇರಲ್ಲ. ಬದಲಾಗಿ ಮಸೀದಿ ಗೋಲಾಕಾರದ ವಿನ್ಯಾಸದಲ್ಲಿ ಭೂಮಿಯಂತೆ ಗಾಜಿನಿಂದ ಮಾಡಲ್ಪಟ್ಟ ಗೋಲರೂಪದಲ್ಲಿ ಮಿಂಚಲಿದೆ ಮಸೀದಿಗೆ ಯಾವುದೇ ರಾಜನ ಹೆಸರು ಇಡಲ್ಲ. ಕ್ಯಾಂಪಸ್‍ನಲ್ಲಿ ಮ್ಯೂಸಿಯಂ, ಗೃಂಥಾಲಯ ಹಾಗೇ ಒಂದು ಸಮುದಾಯದಯ ಪಾಕ ಶಾಲೆ ಸಹ ಇರಲಿದೆ.
200 ರಿಂದ 300 ಬೆಡ್ ಸಾಮರ್ಥ್ಯದ ಆಸ್ಪತ್ರೆ ಮಸೀದಿ ಹಿಂಭಾಗದಲ್ಲಿ ಇರಲಿದೆ. ಎರಡು ಅಂತಸ್ತಿನ ಮಸೀದಿ ತಲೆ ಎತ್ತಲಿದೆ. ಇಲ್ಲಿ ಏಕಕಾಲದಲ್ಲಿ 2 ಸಾವಿರ ಮಂದಿ ನಮಾಝ್ ಮಾಡಬಹುದು. ಇದರಲ್ಲಿ ಮಹಿಳಯರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಆಸ್ಪತ್ರೆ ಒಟ್ಟು ನಾಲ್ಕು ಫ್ಲೋರ್ ಹೊಂದಿರಲಿದ್ದು, ಇನ್ನೂರರಿಂದ ಮುನ್ನೂರು ಬೆಡ್‍ಗಳ ಸಾಮರ್ಥ್ಯದ ಗುರಿಯನ್ನ ಹೊಂದಲಾಗಿದೆ. ಆಸ್ಪತ್ರೆ ನಿರ್ಮಾಣದ ಬಳಿಕ ಚಾರಿಟಿ ಮಾಡೆಲ್ ನಲ್ಲಿ ಕಾರ್ಯನಿರ್ವಹಿಸಲಿದೆ.