ಜನರ ನಿದ್ದೆಗೆಡಿಸಿದ್ದ ಮಂಗನ ಸೆರೆ

Public TV
1 Min Read
Raichur monkey

ರಾಯಚೂರು: ಐದು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಮಂಗನನ್ನ ಕೊನೆಗೂ ಸೆರೆಹಿಡಿಯಲಾಗಿರುಗವ ಘಟನೆ ರಾಯಚೂರಿನ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ಇದನ್ನೂ ಓದಿ:  ಮೊದಲ ದಿನವೇ ಆU,ಆS ಕಿತ್ತಾಟ ಶುರು

Raichur monkey2 medium

ಪಟ್ಟಣದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಗಾಯಗೊಳಿಸಿದ್ದ ಮಂಗ ಜನರನ್ನ ಬೀದಿಯಲ್ಲಿ ಓಡಾಡದಂತೆ ಮಾಡಿತ್ತು. ಪೊಲೀಸ್ ಪೇದೆ, ಚಿಕ್ಕ ಮಕ್ಕಳು, ಮಹಿಳೆಯರು, ಬೈಕ್ ಸವಾರರು ಸೇರಿದಂತೆ ಸಿಕ್ಕಸಿಕ್ಕವರಿಗೆ ಕಚ್ಚಿದ್ದ ಕೋತಿ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮನೆ ಬಾಗಿಲು ಹಾಕಿಕೊಂಡು ಹೊರಬರದೇ ಮನೆಗಳಲ್ಲೇ ಹೆದರಿ ಕುಳಿತುಕೊಳ್ಳುವ ಪರಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣದ ರಥ ಬೀದಿ, ಪೊಲೀಸ್ ವಸತಿ ಗೃಹ, ಭ್ರಮರಾಂಬಾ ದೇವಸ್ಥಾನ ಬಳಿ, ಜಾಲಗಾರ ಓಣಿಯಲ್ಲಿ ಓಡಾಡುತ್ತಿದ್ದ ಮಂಗ ಇಲ್ಲಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಇದನ್ನೂ ಓದಿ: ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

Raichur monkey3 medium

ಸ್ಥಳೀಯ ಅರಣ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗೆ ಕೋತಿಯನ್ನ ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಂಗನನ್ನ ಹಿಡಿಯಲು ಶಿವಮೊಗ್ಗದಿಂದ ಪರಿಣಿತರ ತಂಡ ಕರೆಯಿಸಲಾಗಿತ್ತು. ನುರಿತ ತಂಡದ ಸಹಾಯದಿಂದ ಕೊನೆಗೂ ಅರಣ್ಯ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿ ಮಂಗ ಹಿಡಿದಿದ್ದಾರೆ.

Raichur monkey5 medium

ಅರಣ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಮಂಗ ಹಿಡಿಯುವುದಕ್ಕೆ ತಡ ಮಾಡುತ್ತಿದ್ದಾರೆ. ಹೀಗಾಗಿ ನಾನೇ ಮಂಗವನ್ನ ಹಿಡಿಯುತ್ತೇನೆ ಅಂತ ಹೋಗಿ ಮದ್ಯವ್ಯಸನಿಯೊಬ್ಬ ಕಚ್ಚಿಸಿಕೊಂಡಿದ್ದಾನೆ. ಕೇಸರಿ ವಸ್ತ್ರ ಹಿಡಿದು ಮಂಗನನ್ನ ಆಟವಾಡಿಸಿ ಹಿಡಿಯಲು ಹೋಗಿ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *