ಮೈಸೂರು: ಕೊರೊನಾ ಕಾರಣದಿಂದ ವಿಶ್ವವಿಖ್ಯಾತ ಜಂಬೂಸವಾರಿ ಕಳೆಗುಂದೋದು ಬಹುತೇಕ ಖಚಿತವಾಗಿದೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾದಂತೆ ಕಾಣುತ್ತಿದೆ.
ಇಂದು ಮೈಸೂರಿಗೆ ಭೇಟಿ ಕೊಟ್ಟಿದ್ದ ಡಾ.ಸುದರ್ಶನ್ ನೇತೃತ್ವದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಸೋಂಕು ಹರಡಬಾರದು ಎಂಬ ಕಾರಣಕ್ಕೆ ಹಲವು ಕಠಿಣ ಸಲಹೆಗಳನ್ನು ಪಾಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
Advertisement
Advertisement
ಏನು ಸಲಹೆ ಏನು?
ಜಂಬೂ ಸವಾರಿ ವೀಕ್ಷಣೆಗೆ ಕೇವಲ 300 ಮಂದಿಗೆ ಮಾತ್ರ ಅವಕಾಶ ನೀಡಬೇಕು. ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ 200 ಮಂದಿಗಷ್ಟೇ ಅವಕಾಶ ಕೋಡಬೇಕು.
Advertisement
ಅರಮನೆಯ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು 2 ಗಂಟೆಯಲ್ಲಿ ಮುಗಿಸಬೇಕು. 50 ಮಂದಿಗೆ ಮಾತ್ರ ಅವಕಾಶ ನೀಡಬೇಕು. ಅನ್ಯ ರಾಜ್ಯದ ಕಲಾವಿದರಿಗೆ ಅವಕಾಶ ಕೊಡಕೂಡದು.
Advertisement
ದಸರಾದಲ್ಲಿ ಭಾಗಿಯಾಗುವ ಪೊಲೀಸರು, ಅಧಿಕಾರಿಗಳು, ಮಾಧ್ಯಮದವರು ಅಕ್ಟೋಬರ್ 14 ನಂತರ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು. ದೀಪಾಲಂಕಾರ ಕೂಡ 2 ಗಂಟೆ ಇದ್ದರೆ ಸಾಕು. ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸಲಹೆ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.