– ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟ್ವೀಟ್‍ಗೆ ಕನ್ನಡಿಗರು ಫಿದಾ
ಬೆಂಗಳೂರು: ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ದಿನ ದಿನ ಹೊಸ ಕನ್ನಡ ಟ್ವೀಟ್‍ಗಳನ್ನು ಮಾಡುತ್ತಾ ಕನ್ನಡಿಗರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೂ ಪ್ರಾದೇಶಿಕ ಭಾಷೆಯಲ್ಲಿ ಕ್ರೀಡೆಯನ್ನು ತೋರಿಸುವ ಮೂಲಕ ಭಾರತದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಈಗಾಗಲೇ ಕನ್ನಡ, ತಮಿಳು ಮುಂತಾದ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಕ್ರೀಡೆಯನ್ನು ಪ್ರಸಾರ ಮಾಡುತ್ತಿದೆ. ಅಂತಯೇ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮಾಧ್ಯಮ ಕನ್ನಡದಲ್ಲೇ ಕ್ರೀಡೆಯನ್ನು ತೋರಿಸುವ ಮೂಲಕ ಎಲ್ಲರ ಮನಗೆದ್ದಿದೆ.
Advertisement
ಜಂಟಲ್ ಮನ್.. ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ..!
???? pic.twitter.com/flCy9kB4z8
— Star Sports Kannada (@StarSportsKan) September 30, 2020
Advertisement
ಈಗ ಮತ್ತೆ ಕನ್ನಡಿಗೆ ಮನಸ್ಸುನ್ನು ಗೆದ್ದಿರುವ ಸ್ಟಾರ್ ಕನ್ನಡ ವಾಹಿನಿ, ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದ ಫೋಟೋ ಹಂಚಿಕೊಂಡು ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ ಎಂದು ಬರೆದು ರಾಜಸ್ಥಾನ್ ತಂಡದ ನಾಯಕ ಸ್ಟೀವ್ ಸ್ಮಿತ್ ಮತ್ತು ತೆವಾಟಿಯಾ ಅವರ ಫೋಟೋವನ್ನು ಶೇರ್ ಮಾಡಿದೆ. ಈ ಡೈಲಾಗ್ ಕನ್ನಡ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ ಚಿತ್ರದ್ದಾಗಿದ್ದು, ಈ ದೃಶ್ಯದಲ್ಲಿ ಮುಖ್ಯಮಂತ್ರಿ ಚಂದ್ರು ಮತ್ತು ದೊಡ್ಡಣ್ಣ ಅಭಿನಯಿಸಿದ್ದಾರೆ.
Advertisement
https://twitter.com/TheYashFC/status/1311327201980297218
Advertisement
ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ ಎಂಬ ಟ್ವೀಟ್ ನೋಡಿ ಫುಲ್ ಖುಷಿಯಾದ ಕನ್ನಡಿಗರು, ಹಿಂಗೇ ಹೋದ್ರೆ ಪಾಂಡವಪುರ ಬರಲ್ಲ ಕೈ ನೋವು ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ಪಾಂಡವಪುರ ಯಾಕೆ ಬರುತ್ತದೆ. ಪಾಂಡವಪುರ ಚಕ್ರ ಇದೆಯಾ ಎಂದು ಹಾಸ್ಯಚಟಕಿ ಹಾರಿಸಿದ್ದಾರೆ. ಪಾಂಡವಪುರದವರು ಕಮೆಂಟ್ ಮಾಡಿ ಬನ್ನಿ ನಿಮ್ಮನ್ನು ಪಾಂಡವಪುರ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಹಂಗೋ ಹಿಂಗೋ ಹೆಂಗೋ ಬನ್ನಿ ಪಾಂಡವಪುರಕ್ಕೆ ಸುಸ್ವಾಗತಿಸುತ್ತೇವೆ ನಿಮ್ಮನ್ನ , ಈಗಾಗಲೆ ಎಲ್ರ ಮನೆ ಟೀವಿಲು ಸ್ವಾಗತಿ ಆಗಿದೆ. ಧನ್ಯವಾದಗಳು ನಮಗಾಗಿ ನಿಮ್ಮ ಧ್ವನಿಗಳಿಗೆ @StarSportsKan @vijaybharadwa19 @bharathchipli @SujithSomsu srini, nd Venki sir.
— Manohara G (@ManoharaG2) September 30, 2020
ಈ ಹಿಂದೆಯೂ ಕೂಡ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದ ವಾಹಿನಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪೂರನ್ ಅವರ ಫೀಲ್ಡಿಂಗ್ ಮಾಡುತ್ತಿರುವ ಫೋಟೋವನ್ನು ಹಾಕಿ ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ ಸ್ಟಾರ್ ಕನ್ನಡ ವಾಹಿನಿ, ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ (ಶೇ ಎಂಥ ಫೀಲ್ಡಿಂಗ್ ಮಾರಾಯರೇ) ಎಂದು ತುಳುವಿನಲ್ಲಿ ಬರೆದು ಟ್ವೀಟ್ ಮಾಡಿತ್ತು.
ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…! ???????????? #RRvKXIP https://t.co/2dJ6C5VIQU
— Star Sports Kannada (@StarSportsKan) September 27, 2020