ಛೋಟಾ ಬಾಂಬೆ ಚಿತ್ರದ ನಟಿ, ಮಾಜಿ ಗಗನಸಖಿ, ಮಿಸ್ ಕರ್ನಾಟಕ ಅರೆಸ್ಟ್

Public TV
1 Min Read
Shanaya 2

– ಪ್ರೀತಿಗೆ ಅಡ್ಡ ಬಂದ ಅಣ್ಣನ ಕೊಲೆ ಮಾಡಿಸಿದ ಆರೋಪ

ಹುಬ್ಬಳ್ಳಿ: ತನ್ನ ಪ್ರೀತಿಗೆ ಅಡ್ಡ ಬಂದ ಸಹೋದರನ ಕೊಲೆಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಛೋಟಾ ಮುಂಬೈ ಚಿತ್ರದ ನಟಿಯನ್ನ ಪೊಲೀಸರು ಬಂಧಿಸಿದ್ದಾರೆ. ನಟಿ, ಮಾಜಿ ಗಗನಸಖಿ ಹಾಗೂ ಮಿಸ್ ಕರ್ನಾಟಕ ಕಿರೀಟ ಪಡೆದಿದ್ದ ನಟಿ ಶನಯಾ ಕಾಟವೇಯನ್ನ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಸದ್ಯ ನಟಿಯನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Shanaya

ನಟಿ ಶನಯಾ ಕಾಟವೇ ತನ್ನ ಸೆಲೆಬ್ರಿಟಿ ಮ್ಯಾನೇಜರ್ ಆಗಿದ್ದ ನಿಯಾಜ್ ಅಹ್ಮದ್ ಎಂಬಾತನನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಸಹೋದರ ರಾಕೇಶನನ್ನ ನಟಿಯ ಪ್ರಿಯತಮ ಹಾಗೂ ಸಹಚರರು ಕೊಲೆ ಮಾಡಿದ್ದರು.

ಎಪ್ರಿಲ್ 9ರಂದು ನಟಿಯ ಸಹೋದರ ರಾಕೇಶನನ್ನ ಕೊಲೆ ಮಾಡಲಾಗಿತ್ತು. ಕೊಲೆ ಬಳಿಕ ಮೂರು ದಿನ ಶವವನ್ನ ಕಾರಿನಲ್ಲೆ ಮುಚ್ಚಿಡಲಾಗಿತ್ತು. ಆದ್ರೆ ಶವದ ವಾಸನೆ ಬರುತ್ತಿದ್ದಂತೆ ರುಂಡ, ಮುಂಡ, ಎರಡು ಕೈ ಎರಡು ಕಾಲುಗಳನ್ನ ಕತ್ತರಿಸಿ ದೇಹವನ್ನ ಫೀಸ್ ಫೀಸ್ ಮಾಡಿ ಬೇರೆ ಬೇರೆ ಕಡೆ ಎಸೆಯಲಾಗಿತ್ತು.

Shanaya 3

ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಇತ್ತೀಚಿಗೆ ನಿಯಾಜ್ ಅಹ್ಮದ್ ಕಟಿಗಾರ, ತೌಸೀಫ ಅಹ್ಮದ್ ಚೆನ್ನಾಪುರ, ಅಲ್ತಾಫ ತಾಜುದ್ದೀನ ಮುಲ್ಲಾ ಹಾಗೂ ಅಮನ ಅಲಿಯಾಸ್ ಮಹ್ಮದ ಉಮರ ಗಿರಣಿವಾಲೆ ಎಂಬವರನ್ನ ಬಂಧನ ಮಾಡಿದ್ರು.

ಇದೀಗ ಪ್ರಕರಣವನ್ನ ಮತ್ತಷ್ಟು ಆಳವಾಗಿ ತನಿಖೆ ನಡೆಸಿದ ಪೊಲೀಸರು ಇದೇ ಪ್ರಕರಣದಲ್ಲಿ ನಟಿ ಶನಾಯ ಕಾಟವೆ ಸಹಿತ ಮಲೀಕ್, ಫಿರೋಜ್ ಹಾಗೂ ಶೈಪುದ್ದೀನ ಎಂಬಾತನನ್ನ ಬಂಧನ ಮಾಡಿದ್ದಾರೆ. ಈ ಮೂಲಕ ಸಹೋದರನ ಕೊಲೆ ಪ್ರಕರಣದಲ್ಲಿ ನಟಿ ಸೇರಿದಂತೆ ಎಂಟು ಜನರನ್ನ ಬಂಧನ ಮಾಡಲಾಗಿದೆ.

Shanaya 1

ರಾಕೇಶ್ ಕಾಟವೇ ಕೊಲೆ ಪ್ರಕರಣದಲ್ಲಿ ಇದೂವರೆಗೂ ಒಟ್ಟು ಎಂಟು ಜನರನ್ನ ಪೊಲೀಸರು ಬಂಧಿಸುವ ಮೂಲಕ ಪೊಲೀಸ ಇಲಾಖೆಗೆ ಚಾಲೆಂಜ್ ಆಗಿದ್ದ ಪ್ರಕರಣವನ್ನ ಭೇಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಧಾರವಾಡ ಎಸ್ ಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *