ರಾಯ್‍ಪುರ್: ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ (74) ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.
ಛತ್ತೀಸ್‍ಗಢ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಜೋಗಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಮೇ 9ರಿಂದ ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ರೇಣು ಜೋಗಿ, ಛತ್ತೀಸ್‍ಗಢದ ಶಾಸಕ ಮತ್ತು ಮಗ ಅಮಿತ್ ಜೋಗಿ ಇದ್ದಾರೆ.
Advertisement
Advertisement
ಜೋಗಿ ಅವರು ಛತ್ತೀಸ್‍ಗಢ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ 2000 ನವೆಂಬರ್ ನಿಂದ 2003ರ ನವೆಂಬರ್ ವರೆಗೆ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಜೋಗಿ ಅವರು ಮತ್ತು ಅವರ ಮಗ ಉಪಚುನಾವಣೆಯ ವಿವಾದದಲ್ಲಿ ಸಿಲುಕಿದ ನಂತರ 2016ರಲ್ಲಿ ಕಾಂಗ್ರೆಸ್‍ನಿಂದ ಹೊರ ಬಂದರು. ಬಳಿಕ ಜನತಾ ಕಾಂಗ್ರೆಸ್ ಛತ್ತೀಸ್‍ಗಢ ಪಕ್ಷವನ್ನು ಕಟ್ಟಿದ್ದರು.
Advertisement
Our condolences on the passing away of Shri Ajit Jogi, former Chief Minister of Chhattisgarh.
He served in various administrative and political positions and was a people friendly leader.
Our thoughts are with his family, friends and followers. pic.twitter.com/o92JmXF7Ng
— All India Mahila Congress (@MahilaCongress) May 29, 2020