ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದರೆ ರಾಜ್ಯದಲ್ಲಿ ಗುಣಮುಖವಾಗುತ್ತಿರೋ ಸಂಖ್ಯೆ ತೀರಾ ಕಡಿಮೆ ಇರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದೊಂದು ವಾರದ ಅಂಕಿ ಅಂಶಗಳನ್ನು ಗಮನಿಸಿದರೆ ಚೇತರಿಕೆ ಪ್ರಮಾಣ ಕಡಿಮೆ ಆಗುತ್ತಿರುವುದು ಕಂಡು ಬರುತ್ತೆ. ಚೇತರಿಕೆ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೆಳಗಿನಿಂದ 2ನೇ ಸ್ಥಾನ ಗಿಟ್ಟಿಸಿದ್ದನ್ನು ನೋಡಿದರೆ ನೀವೇ ಊಹಿಸಿಕೊಳ್ಳಬಹುದು.
ಕಡಿಮೆ ಚೇತರಿಕೆ ರಾಜ್ಯಗಳ ಪಟ್ಟಿ
ಅರುಣಾಚಲಪ್ರದೇಶ – ಶೇ.39.7
ಕರ್ನಾಟಕ – ಶೇ.41.3
ಆಂಧ್ರ ಪ್ರದೇಶ – ಶೇ.51
ಮಹಾರಾಷ್ಟ್ರ – ಶೇ.54.40
ಇಡಿ ದೇಶದಲ್ಲಿ – ಶೇ.62.09
ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗುತ್ತಿರುವ 10,100 ಹಾಸಿಗೆಗಳ ವಿಶ್ವದ ಅತಿದೊಡ್ಡ #ಕೋವಿಡ್19 ಕೇರ್ ಸೆಂಟರ್ ನಲ್ಲಿ ಒದಗಿಸಲಾಗುವ ಸೌಲಭ್ಯಗಳು, ಆಹಾರ, ಚಿಕಿತ್ಸಾ ಸಿಬ್ಬಂದಿ ಹಾಗೂ ಇತ್ಯಾದಿ ವಿವರಗಳು.#CovidCareCentre #KarnatakaFightsCorona pic.twitter.com/ORFBH0lcDY
— B Sriramulu (@sriramulubjp) July 10, 2020
ದೇಶದ ಮೆಟ್ರೋ ನಗರಗಳಿಗೆ ಹೋಲಿಕೆ ಮಾಡಿದ್ರೆ ಬೆಂಗಳೂರಲ್ಲಿ ಚೇತರಿಕೆ ಪ್ರಮಾಣ ಕಡಿಮೆಯಿದೆ.
ದೆಹಲಿ – ಶೇ.76
ಚೆನ್ನೈ – ಶೇ.71
ಮುಂಬೈ – ಶೇ.61.05
ಕೊಲ್ಕೊತಾ – ಶೇ.59.67
ಬೆಂಗಳೂರು – ಶೇ.22