ಮುಂಬೈ: ನನ್ನ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾವಾಗಲೂ ಸುರೇಶ್ ರೈನಾ ಪರ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ಚೆನ್ನೈ ತಂಡದ ಮಾಲೀಕ ಶ್ರೀನಿವಾಸನ್, ಸಿಎಸ್‍ಕೆ ತಂಡಕ್ಕೆ ರೈನಾ ಅವರ ಕೊಡುಗೆ ಅದ್ಭುತವಾಗಿದೆ. ಸುರೇಶ್ ರೈನಾ ಅವರು ಇದೀಗ ಏನು ಮಾಡುತ್ತಿದ್ದಾರೆ ಎಂಬುವುದನ್ನು ಅರ್ಥ ಮಾಡಿಕೊಂಡು ಅವರಿಗೆ ಅವಕಾಶ ನೀಡುವುದು ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ರೈನಾ ಬೆನ್ನಲ್ಲೇ ಚೆನ್ನೈಗೆ ಮತ್ತೊಂದು ಹಿನ್ನಡೆ- ಮತ್ತೊಬ್ಬ ಸ್ಟಾರ್ ಆಟಗಾರ ಟೂರ್ನಿಯಿಂದ ದೂರ?
ನಮ್ಮ ತಂಡ ಆಟಗಾರರು ಒಂದೇ ಕುಟುಂಬದಂತೆ. ಕಳೆದ ಒಂದು ದಶಕದಿಂದ ಕುಟುಂಬವಾಗಿದ್ದೇವೆ. ನಾನು ಕ್ರಿಕೆಟಿಗರನ್ನು ಪ್ರೈಮಾ ಡೊನ್ನಾಗಳಂತೆ ಹೋಲಿಕೆ ಮಾಡಿದೆ. ಆದರೆ ಅದು ನಕಾರಾತ್ಮಕವಲ್ಲ. ಪ್ರೈಮಾ ಡೊನ್ನಾ ಪ್ರಮುಖ ಗಾಯಕರು, ಅದೇ ರೀತಿ ಕ್ರಿಕೆಟಿಗರು ಯಾವಾಗಲೂ ವ್ಯಾಯಾಮದಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳಿದ್ದಾಗಿ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಅದರೇ ಇದನ್ನು ತಪ್ಪಾಗಿ ಉಲ್ಲೇಖಿಸಿದ್ದು ದುರದೃಷ್ಟಕರ ಎಂದಿದ್ದಾರೆ.
ಐಪಿಎಲ್ ಟೂರ್ನಿ ಭಾರತದ ಹೆಮ್ಮೆ. ವಿಶ್ವದ ಅತಿದೊಡ್ಡ ಬ್ರಾಂಡ್ ಆಗಿ ರಫ್ತು ಎಂದು ಹೇಳಬಹುದು. ಐಪಿಎಲ್ ವಿಶ್ವದ ಅತಿದೊಡ್ಡ ಕ್ರೀಡಾ ಟೂರ್ನಿ ಎಂದು ಹೇಳಲು ನಾವು ತುಂಬಾ ಹೆಮ್ಮೆ ಪಡುತ್ತೇವೆ. ಏಕೆಂದರೆ ಕೇವಲ 13 ವರ್ಷಗಳಲ್ಲಿ ಅಷ್ಟು ದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೋಟೆಲ್ ರೂಮ್ ವಿಚಾರದಲ್ಲಿ ರೈನಾ ಕಿರಿಕ್- ಐಪಿಎಲ್ ತೊರೆಯಲು ಇದೇನಾ ಕಾರಣ?