– 100 ಜಿಲೆಟಿನ್ ಕಡ್ಡಿ, 350 ಡಿಟೋನೇಟರ್ ಪತ್ತೆ
ತಿರುವನಂತಪುರಂ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ಯಾಸೆಂಜರ್ ಬಳಿ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್‌ಗಳನ್ನು ಆರ್‌ಪಿಎಫ್ ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ತಮಿಳುನಾಡು ಮೂಲದ ರಮಣಿ ಸ್ಫೋಟಕಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದಳು. ಮಹಿಳೆ ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಕೋಯಿಕೋಡ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್, ಆರ್‌ಪಿಎಫ್ ಪೊಲೀಸರು ಮಹಿಳೆಯಿಂದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡೆದಿದ್ದಾರೆ.
Advertisement
Advertisement
ಕಟ್ಟಾಡಿಯಿಂದ ತಲಸ್ಸೆರಿಗೆ ಈ ಸ್ಫೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್‌ಗಳನ್ನು ಯಾರಿಗೂ ತಿಳಿಯದಂತೆ ರೈಲಿನಲ್ಲಿ ಸಾಗಿಸುತ್ತಿದ್ದರು. ಬ್ಯಾಗ್‍ನಲ್ಲಿ ಈ ಸ್ಫೋಟಕಗಳನ್ನು ಹಾಕಿ ಸೀಟ್ ಕೆಳಗಡೆ ಇಟ್ಟು ಸಾಗಿಸುತ್ತಿದ್ದರು. ಮಹಿಳೆಯನ್ನು ಸ್ಫೋಟಕ ವಸ್ತುಗಳ ಸಮೇತ ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Kerala: Railway Protection Force (RPF) seizes more than 100 gelatin sticks and 350 detonators from a woman passenger at Kozhikode Railway Station; takes her into custody. pic.twitter.com/tNnn8ZfE8A
— ANI (@ANI) February 26, 2021
Advertisement
ವಿಚಾರಣೆ ವೇಳೆ ಮಹಿಳೆ ಬಾವಿ ತೋಡಲು ಜಿಲೆಟಿನ್ ಕಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.