ಚೆನ್ನೈಗೆ 20 ರನ್‍ಗಳ ಜಯ – ಮತ್ತೆ ಮರುಕಳಿಸಿದ ಇತಿಹಾಸ

Public TV
3 Min Read
CSK

ದುಬೈ: ಚೆನ್ನೈ ಬೌಲರ್ ದಾಳಿಗೆ ತತ್ತರಿಸಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮಹತ್ವದ ಪಂದ್ಯದಲ್ಲಿ ಸೋಲುಂಡಿದ್ದು, ಧೋನಿ ಪಡೆ 20 ರನ್ ಗೆಲುವು ಪಡೆದಿದೆ. ಅಲ್ಲದೇ 6 ಅಂಕಗಳೊಂದಿಗೆ ಅಂಕಪಪಟ್ಟಿಯಲ್ಲಿ ಚೆನ್ನೈ 6ನೇ ಸ್ಥಾನಕ್ಕೇರಿದೆ.

ಚೆನ್ನೈ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯುವದರೊಂದಿಗೆ ಇತಿಹಾಸ ಮರುಕಳಿಸಿದೆ. ಐಪಿಎಲ್ 2010ರ ಆವೃತ್ತಿಯಲ್ಲಿ ಮೊದಲ 7 ಪಂದ್ಯಗಳು ಮುಕ್ತಾಯವಾದ ಸಂದರ್ಭದಲ್ಲಿ 7ನೇ ಸ್ಥಾನದಲ್ಲಿದ್ದ ಚೆನ್ನೈ ತಂಡ ಆ ಬಳಿಕ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿತ್ತು. ಈ ವೇಳೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8ನೇ ಸ್ಥಾನದಲ್ಲಿತ್ತು. ಅಲ್ಲದೇ ಮುಂಬೈ ತಂಡ ಕೂಡ ಅಂಕಪಟ್ಟಿಯಲ್ಲಿ ಟಾಪ್ ನಂ.1 ಸ್ಥಾನದಲ್ಲಿತ್ತು. ಸದ್ಯ ಹೈದರಾಬಾದ್ ವಿರುದ್ಧ ಗೆಲುವಿನೊಂದಿಗೆ ಇತಿಹಾಸ ಮರುಕಳಿಸುವ ಮುನ್ಸೂಚನೆಯನ್ನ ನೀಡಿದೆ.

CSK a

ಚೆನ್ನೈ ನೀಡಿದ್ದ 168 ರನ್ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು.

168 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕರಾದ ವಾರ್ನರ್, ಬೈರ್ ಸ್ಟೋವ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ವಾರ್ನರ್ 9 ರನ್, ಬೈರ್ ಸ್ಟೋವ್ 23 ರನ್, ಮನೀಷ್ ಪಾಂಡೆ 4 ರನ್ ಗಳಸಿ ವಿಕೆಟ್ ಪೆವಿಲಿಯನ್ ತೆರಳಿದರು. 10 ಓವರ್ ಗಳಲ್ಲಿ 59 ರನ್ ಗಳಿಸಿದ್ದ ಎಸ್‍ಆರ್ ಎಚ್ ಪ್ರಮುಖ 3 ವಿಕೆಟ್ ಕಳೆದುಕೊಂದು ಸಂಕಷ್ಟಕ್ಕೆ ಸಿಲುಕಿತ್ತು.

dhoni jadeja

ವಿಕೆಟ್ ಉರುಳುತ್ತಿದ್ದರೂ ಭರವಸೆಯ ಬ್ಯಾಟಿಂಗ್‍ನೊಂದಿಗೆ ವಿಲಿಯಮ್ಸ್ ಸನ್ 39 ಎಸೆತಗಳಲ್ಲಿ 7 ಬೌಂಡರಿ ಗಳೊಂದಿಗೆ 57 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ತರುವ ಪ್ರಯತ್ನ ಮಾಡಿದರು. ಆದರೆ ಕರಣ್ ಶರ್ಮಾ ಬೌಲಿಂಗ್‍ನಲ್ಲಿ ಭಾರೀ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಬೇರೆಯಾವುದೇ ಆಟಗಾರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಗರ್ಗ್ 16 ರನ್, ವಿಜಯ್ ಶಂಕರ್ 12 ರನ್, ನದೀಮ್ 5 ರನ್ ಗಳಿಸಿ ಔಟಾದರೆ, ರಶೀದ್ ಖಾನ್ ಹಿಟ್ ವಿಕೆಟ್ ಆಗುವ ಪೆವಿಲಿಯನ್ ಸೇರಿದರು.

ಚೆನ್ನೈ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕರಣ್ ಶರ್ಮಾ, ಬ್ರಾವೋ ತಲಾ 2 ವಿಕೆಟ್ ಹಾಗೂ ಕರ್ರನ್, ಜಡೇಜಾ, ಠಾಕೂರ್ ತಲಾ 1 ವಿಕೆಟ್ ಪಡೆದು ಚೆನ್ನೈ ಗೆಲುವಿಗೆ ಕಾರಣರಾದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟಾಪ್ ಅರ್ಡರ್ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಕಾರಣದಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು.

ಡುಪ್ಲೆಸಿಸ್ ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರೆ, ಕರ್ರನ್ 21 ಎಸೆತಗಳಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಬಳಿಕ ಬಂದ ರಾಯುಡು 34 ಎಸೆತಗಳಲ್ಲಿ 41 ರನ್, ವ್ಯಾಟ್ಸನ್ 38 ಎಸೆತಗಳಲ್ಲಿ 42 ರನ್ ಗಳಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 81 ರನ್ ಜೊತೆಯಾಟ ನೀಡಿತ್ತು. ಧೋನಿ 13 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರೆ, ಬ್ರಾವೋ ಶೂನ್ಯ ಸಾಧನೆ ಮಾಡಿದರು. ಅಂತಿಮವಾಗಿ ಜಡೇಜಾ 25 ರನ್, ಚಹರ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.

ಹೈದರಾವಾದ್ ಪರ ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ನಟರಾಜನ್ ತಲಾ 2 ವಿಕೆಟ್ ಪಡೆದರು. ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೆ ರಶೀದ್ ಖಾನ್ ನಿರಾಸೆ ಮೂಡಿಸಿದ್ದರು.

CSK A 2

Share This Article
Leave a Comment

Leave a Reply

Your email address will not be published. Required fields are marked *