ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಟೀ ಎಲೆಗಳನ್ನು ಕಿತ್ತಿದ್ದಾರೆ. ಈ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
ಅಸ್ಸಾಂನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಪ್ರಿಯಾಂಕಾ ವಾದ್ರಾ ಪ್ರಚಾರದ ಅಂಗವಾಗಿ ಅಲ್ಲಿನ ಆದಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ ಟೀ ಎಲೆಗಳನ್ನು ಕೊಯ್ದಿದಿದ್ದಾರೆ.
Advertisement
चाय बागान के श्रमिकों का जीवन सच्चाई एवं सादगी से भरा हुआ है एवं उनका श्रम देश के लिए बहुमूल्य है।
आज उनके संग बैठकर उनके कामकाज, घर परिवार का हालचाल जाना और उनके जीवन की कठिनाइयों को महसूस किया।
उनसे मिला प्रेम और ये आत्मीयता नहीं भूलूँगी pic.twitter.com/i99byrBtXn
— Priyanka Gandhi Vadra (@priyankagandhi) March 2, 2021
Advertisement
ಚಹಾ ತೋಟ ಕಾರ್ಮಿಕರ ಜೀವನವು ಸತ್ಯ ಮತ್ತು ಸರಳತೆಯಿಂದ ಕೂಡಿದೆ ಮತ್ತು ಅವರ ಶ್ರಮ ದೇಶಕ್ಕೆ ಅಮೂಲ್ಯವಾಗಿದೆ. ಇಂದು ಅವರೊಂದಿಗೆ ಕುಳಿತುಕೊಳ್ಳುವುದು ಅವರ ಕೆಲಸ, ಕುಟುಂಬದ ಯೋಗಕ್ಷೇಮ ಮತ್ತು ಅವರ ಜೀವನದ ಕಷ್ಟಗಳನ್ನು ಅನುಭವ ತಿಳಿದುಕೊಂಡೆ. ಅವರಿಂದ ನನಗೆ ದೊರೆತ ಪ್ರೀತಿ ಮತ್ತು ಈ ಅನ್ಯೋನ್ಯತೆಯನ್ನು ನಾನು ಮರೆಯುವುದಿಲ್ಲ ಎಂದು ಬರೆದುಕೊಂಡು ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
Smt. @priyankagandhi learns the intricacies of tea leaf plucking directly from the women tea workers at Sadhuru tea garden, Assam.#AssamWithPriyankaGandhi pic.twitter.com/605Kuah2UL
— Congress (@INCIndia) March 2, 2021
Advertisement
ಚಹಾ ತೋಟದಲ್ಲಿ ಮಹಿಳಾ ಚಹಾ ಕಾರ್ಮಿಕರಿಂದ ಚಹಾ ಎಲೆಗಳನ್ನು ಬಿಡಿಸಿದ್ದಾರೆ ಎಂದು ಬರೆದುಕೊಂಡು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರೀಯಾಂಕಾ ಅವರು ಎಲೆ ಕೀಳುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಚುನಾವಣೆ ಆರಂಭವಾಗಲಿದ್ದು, ಪ್ರಿಯಾಂಕ ಗಾಂಧಿ 2 ದಿನಗಳ ಕಾಲ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ವಿಧಾನಸಭಾ ಚುನಾವಣೆ ಮೂರು ಹಂತದಲ್ಲಿ ನಡೆಯಲಿದೆ.