– ‘ಐಪಿಎಲ್’ ಚೀನಾ ಪ್ರೀಮಿಯರ್ ಲೀಗ್ ಅಲ್ಲ!
ಮುಂಬೈ: ಭಾರತ ಹಾಗೂ ಚೀನಾ ನಡುವೆ ನಿರ್ಮಾಣವಾಗಿರುವ ಉದ್ರಿಕ್ತ ಪರಿಸ್ಥಿತಿ ಐಪಿಎಲ್ ಮೇಲೂ ಪರಿಣಾಮ ಬೀರುತ್ತಿದೆ. ಚೀನಾ ಗಾಲ್ವಾನ್‍ನಲ್ಲಿ ವಂಚನೆಯಿಂದ ದಾಳಿ ನಡೆಸಿತ್ತು. ಪರಿಣಾಮ ಭಾರತದ 20 ಯೋದರು ಹುತಾತ್ಮರಾಗಿದ್ದರು. ಆ ಬಳಿಕ ದೇಶದಲ್ಲಿ ಚೀನಾ ಉತ್ಪನ್ನಗಳ ಬಳಕೆ ಕೈಬಿಡ ಬೇಕು ಎಂಬ ಅಂದೋಲನ ಹೆಚ್ಚಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ದೇಶದ ಭದ್ರತೆಯ ದೃಷ್ಟಿಯಿಂದ 59 ಚೀನಾ ಮೂಲದ ಆ್ಯಪ್‍ಗಳಿಗೆ ನಿಷೇಧ ವಿಧಿಸಿದೆ. ಈ ಇದೇ ವೇಳೆ ಐಪಿಎಲ್ ಪ್ರಾಯೋಜಕತ್ವದ ವಿಚಾರದಲ್ಲೂ ಆಸಕ್ತಿಕರ ಚರ್ಚೆ ನಡೆದಿದೆ.
Advertisement
ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೋ ಮೊದಲ ಸಂಸ್ಥೆ ಪಡೆದಿದೆ. ಬಿಸಿಸಿಐನೊಂದಿಗೆ 2018ರಲ್ಲಿ 5 ವರ್ಷಕ್ಕೆ 2,199 ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿದೆ. ಅಲ್ಲದೇ ಪ್ರತಿ ವರ್ಷ 440 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿ ಮಾಡುತ್ತಿದೆ. ಈ ಒಪ್ಪಂದ 2022ರ ಐಪಿಎಲ್ ಆವೃತ್ತಿ ಬಳಿಕ ಅಂತ್ಯವಾಗಲಿದೆ. ಆದರೆ ಈ ಒಪ್ಪಂದವನ್ನು ಅದಷ್ಟೂ ಶೀಘ್ರವೇ ರದ್ದು ಮಾಡಿಕೊಳ್ಳಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ.
Advertisement
Advertisement
ಐಪಿಎಲ್‍ನೊಂದಿಗೆ ಚೀನಾ ಮೂಲದ ವಿವೋ ಮಾತ್ರವಲ್ಲದೇ ಪೇಟಿಎಂ, ಸ್ವಿಗ್ಗಿ, ಡ್ರೀಮ್ ಇಲೆವೆನ್ ಸೇರಿದಂತೆ ಹಲವು ಸಂಸ್ಥೆಗಳು ಒಪ್ಪಂದವನ್ನು ಮಾಡಿಕೊಂಡಿವೆ. ಪರಿಣಾಮ ಏಕಾಏಕಿ ಬಿಸಿಸಿಐ ಒಪ್ಪಂದ ರದ್ದು ಮಾಡಿಕೊಂಡರೇ ಸಾಕಷ್ಟು ನಷ್ಟ ಎದುರಿಸಬೇಕಾಗುತ್ತದೆ.
Advertisement
ಐಪಿಎಲ್‍ನಲ್ಲಿ ಚೀನಾ ಮೂಲದ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಬಿಸಿಸಿಐ ಕೈಬಿಡಬೇಕು. ಮೊದಲು ದೇಶ, ಆ ಬಳಿಕವೇ ಹಣ. ಐಪಿಎಲ್ ಎಂದರೇ ಇಂಡಿಯನ್ ಪ್ರೀಮಿಯರ್ ಲೀಗ್, ಚೀನಿಸ್ ಪ್ರೀಮಿಯರ್ ಲೀಗ್ ಅಲ್ಲ. ಒಪ್ಪಂದಗಳನ್ನು ರದ್ದು ಮಾಡಿಕೊಳ್ಳುವ ಮೂಲಕ ಬಿಸಿಸಿಐ ಎಲ್ಲರಿಗೂ ಆದರ್ಶವಾಗಿ ನಿಲ್ಲಬೇಕಿದೆ. ಸದ್ಯ ಇರುವ ಪ್ರಾಯೋಜಯತ್ವವನ್ನು ಕೈಬಿಟ್ಟರೇ ಕೂಡಲೇ ಬೇರೆ ಸಂಸ್ಥೆ ಸಿಗುವುದು ಕಷ್ಟ. ಆದರೆ ಭಾರತದ ಹಲವು ಸಂಸ್ಥೆಗಳು ಪ್ರಾಯೋಜಕತ್ವ ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಎಲ್ಲದಕ್ಕಿಂತ ನಮಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಗೌರವ ನೀಡಬೇಕಿದೆ ಎಂದು ನೆಸ್ ವಾಡಿಯಾ ಹೇಳಿದ್ದಾರೆ.