– ನರೇಂದ್ರ ಮೋದಿ ನಕಲಿ ಸ್ಟ್ರಾಂಗ್ ಮ್ಯಾನ್
– ಚೀನಾ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿದೆ
ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೊರೊನಾ ವೈರಸ್ ನಿಯಂತ್ರಣ, ಚೀನಾ ಗಲಾಟೆ ಹಾಗೂ ಜಿಡಿಪಿ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಪ್ರಧಾನಿಗಳ ನಕಲಿ ಪ್ರಬಲ ನಾಯಕ ಎಂಬ ಇಮೇಜ್ ಭಾರತದ ಬಹುದೊಡ್ಡ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ವಿಡಿಯೋ ಟ್ವೀಟ್ ಮಾಡಿ, ಭಾರತ-ಚೀನಾ ಗಡಿ ವಿವಾದದ ಕುರಿತು ಮಾತನಾಡಿದ್ದಾರೆ. ಚೀನಾ ಜಗತ್ತನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಚೀನಾ ಯುದ್ಧ ತಂತ್ರದ ಬಗ್ಗೆ ಯೋಜನೆ ರೂಪಿಸುತ್ತಿದೆ ಎಂಬುದರ ಕುರಿತು ಅವರ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ನಕಲಿ ಸ್ಟ್ರಾಂಗ್ ಮ್ಯಾನ್ ಎಂಬ ಚಿತ್ರಣವನ್ನು ರೂಪಿಸಿದಿದ್ದಾರೆ. ಇದೇ ಅವರ ದೊಡ್ಡ ಶಕ್ತಿಯಾಗಿದೆ, ಆಟದ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
Advertisement
PM fabricated a fake strongman image to come to power. It was his biggest strength.
It is now India’s biggest weakness. pic.twitter.com/ifAplkFpVv
— Rahul Gandhi (@RahulGandhi) July 20, 2020
Advertisement
ಲಡಾಖ್‍ನಲ್ಲಿ ಚೀನಾ ಪಡೆ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಇದು ಕೇವಲ ಗಡಿ ವಿಚಾರ ಮಾತ್ರವಲ್ಲ ಚೀನಾ ಜಗತ್ತನ್ನು ರೂಪಿಸಲು ಯತ್ನಿಸುತ್ತಿದೆ. ಇಂದು ಚೀನಾದವರು ನಮ್ಮ ಗಡಿ ಪ್ರದೇಶದಲ್ಲಿ ಮೊಕ್ಕಾಂ ಹೂಡಿರುವ ಕುರಿತು ಚಿಂತೆ ಕಾಡುತ್ತಿದೆ. ಕಾರ್ಯತಂತ್ರ ರೂಪಿಸದೆ ಚೀನಾ ಏನನ್ನೂ ಮಾಡುವುದಿಲ್ಲ. ವಿಶ್ವದ ಬಗ್ಗೆ ಈಗಾಗಲೇ ಅವರು ನಕ್ಷೆ ರೂಪಿಸಿದ್ದು, ಜಗತ್ತನ್ನು ರೂಪಿಸಲು ಹೊರಟಿದ್ದಾರೆ. ಹೀಗಾಗಿ ನೀವು ಚೀನಾದ ಬಗ್ಗೆ ಯೋಚಿಸುವ ಮೋದಲು ಅವರ ಯೋಚನಾ ಮಟ್ಟವನ್ನು ಅರಿಯಬೇಕಿದೆ ಎಂದು ಚೀನಾದ ಕಾರ್ಯತಂತ್ರ ಹಾಗೂ ಯುದ್ಧ ತಂತ್ರದ ಕುರಿತು ಮಾತನಾಡಿದ್ದಾರೆ.
Advertisement
ಚೀನಾ ಗಲ್ವಾನ್ ವ್ಯಾಲಿ ಸೇರಿದಂತೆ ಲಡಾಖ್‍ನ ವಿವಿಧ ಪ್ರದೇಶಗಳಲ್ಲಿ ಎಲ್‍ಎಸಿ ಉದ್ದಕ್ಕೂ ತನ್ನ ಸೇನೆಯನ್ನು ಶಸ್ತ್ರಸಜ್ಜಿತವಾಗಿರಿಸಿದೆ. ಅಲ್ಲದೆ ನಾವು ಹೈವೇ ನಿರ್ಮಾಣ ಮಾಡಿದ್ದಕ್ಕೆ ಚೀನಾ ವಿಚಲಿತವಾಗಿದೆ. ಹೀಗಾಗಿ ನಮ್ಮ ಹೆದ್ದಾರಿಯ ಮೇಲೆ ಹಿಡಿತ ಸಾಧಿಸಬಹುದು. ಚೀನಾ ಏನಾದರೂ ದೊಡ್ಡ ಮಟ್ಟದಲ್ಲಿ ಯೋಚಿಸಿದರೆ. ಪಾಕಿಸ್ತಾನದೊಂದಿಗೆ ಸೇರಿಕೊಂಡು ಕಾಶ್ಮೀರದಲ್ಲಿ ಕಿತಾಪತಿ ನಡೆಸಿರೆ, ಇದು ಕೇವಲ ಗಡಿ ವಿಚಾರವಲ್ಲ. ಭಾರತದ ಪ್ರಧಾನಿ ಮೇಲೆ ಒತ್ತಡ ಹೇರುವ ತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಚೀನಾ ದಾಳಿ ನಡೆಸುವ ನೈಜ ತಂತ್ರ ಇದೇ ಆಗಿದ್ದು, ನರೇಂದ್ರ ಮೋದಿ ನಾವು ಹೇಳಿದ ರೀತಿ ಮಾಡದಿದ್ದರೆ, ಬಲಶಾಲಿ ನಾಯಕ ಮೋದಿಯವರ ಐಡಿಯಾಗಳನ್ನು ನಾವು ನಾಶಪಡಿಸುತ್ತೇವೆ ಎಂದು ಚೀನಾ ಎಚ್ಚರಿಸಿದೆ ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.