– ಹಿಮಾಚಲ ಪ್ರದೇಶದ ಗಡಿಯಲ್ಲಿ ಹೈ ಅಲರ್ಟ್
ನವದೆಹಲಿ: ಚೀನಾ ಹಾಗೂ ಭಾರತೀಯ ಸೇನೆಯ ನಡುವೆ ಸೋಮವಾರ ರಾತ್ರಿ 11.30ರಿಂದ ಸಂಘರ್ಷ ನಡೆಯುತ್ತಿದ್ದು, ಇಂದು 43 ಮಂದಿ ಚೀನಾ ಯೋಧರನ್ನು ಸದೆಬಡಿಯುವ ಮೂಲಕ ಭಾರತೀಯ ಸೇನೆ ಪ್ರತಿಕಾರ ತೀರಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ, ಭಾರತ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುತ್ತೆ. ನಿನ್ನೆ ಸಂಜೆ ಸಂಘರ್ಷ ನಡೆದಿದ್ದು ನಿಜ. ಆದರೆ ಚೀನಾ ತನ್ನ ಮಾತಿನಂತೆ ನಡೆದುಕೊಳ್ಳುತ್ತಿದ್ದರೆ ಸಂಘರ್ಷ ಆಗುತ್ತಿರಲಿಲ್ಲ ಎಂದು ತಿಳಿಸಿದೆ.
Advertisement
ಎರಡೂ ಕಡೆಯಲ್ಲೂ ಸಾಕಷ್ಟು ಜೀವ ಹಾನಿಯಾಗಿದೆ. ಗಡಿ ರಕ್ಷಣೆಗೆ ಭಾರತ ಸದಾ ಸನ್ನದ್ಧಗಿದೆ. ಸದ್ಯ ಗುಲ್ವಾನ್ ಕಣಿವೆಯಲ್ಲಿ ಉಗ್ವಿಗ್ನ ಶಮನವಾಗಿದೆ ಎಂದಿದೆ.
Advertisement
Indian intercepts reveal that Chinese side suffered 43 casualties including dead and seriously injured in face-off in the Galwan valley: Sources confirm to ANI pic.twitter.com/xgUVYSpTzs
— ANI (@ANI) June 16, 2020
Advertisement
ಒಟ್ಟಿನಲ್ಲಿ 45 ವರ್ಷಗಳಲ್ಲಿ ಅತ್ಯಂತ ಘೋರ ಘರ್ಷಣೆ ಇದಾಗಿದ್ದು, ಹಿಮಾಚಲ ಪ್ರದೇಶದ ಗಡಿಯಲ್ಲಿ ಹೈ ಅಲರ್ಟ್ ಘೊಷಣೆ ಮಾಡಲಾಗಿದೆ.
Advertisement
ಚೀನಾಗೆ ಭಾರತೀಯ ಯೋಧರು ತಕ್ಕ ಪಾಠ ಕಲಿಸಿದ್ದು, ದಾಳಿಯಲ್ಲಿ ಚೀನಾದ 43 ಯೋಧರನ್ನು ಸದೆಬಡಿಯಲಾಗಿದೆ. 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.