ನವದೆಹಲಿ: ಒಂದು ಕಡೆ ಚೀನಾ ನೇರವಾಗಿ ಸೈನಿಕರ ಜೊತೆ ಕದಾಟಕ್ಕೆ ಇಳಿದು ದೇಶದ ಜಾಗವನ್ನು ಕಬಳಿಸಲು ಸಂಚು ರೂಪಿಸಿದ್ದರೆ ಇನ್ನೊಂದು ಕಡೆ ಭಾರತ ಪ್ರಜೆಗಳ ಡೇಟಾವನ್ನು ಕದಿಯುತ್ತಿದೆ.
ಹೌದು, ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಚೀನಿ ಅಪ್ಲಿಕೇಶನ್‌ಗಳಿಂದ ದೇಶದ ಭದ್ರತೆಗೆ ಸಮಸ್ಯೆಯಾಗಬಹುದು ಎಂದು ಗುಪ್ತಚರ ಇಲಾಖೆ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ಗೆ ತಿಳಿಸಿದ್ದು ಈ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ನಿಷೇಧಿಸಬೇಕೆಂಬ ಪ್ರಸ್ತಾಪ ಬಂದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ 52 ಅಪ್ಲಿಕೇಶನ್‌ಗಳನ್ನು ಪರೀಕ್ಷೆ ಮಾಡಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮ ವರದಿ ಮಾಡಿದೆ. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.
Advertisement
ಈ ವರ್ಷದ ಏಪ್ರಿಲ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ವಿಡಿಯೋ ಕಾನ್ಫೆರೆನ್ಸ್ ಗೆ ಬಳಸುವ ಝೂಮ್ ಟೂಲ್‌ನಲ್ಲಿ ಭದ್ರತಾ ಸಮಸ್ಯೆಯಿದೆ ಎಂದು ಹೇಳಿತ್ತು. ಅಲ್ಲದೇ ಸರ್ಕಾರದ ಯಾವುದೇ ಕಾರ್ಯಕ್ರಮದಲ್ಲಿ ಈ ಟೂಲ್ ಬಳಸದಂತೆ ನಿರ್ಬಂಧ ಹೇರಿತ್ತು. ತೈವಾನ್, ಜರ್ಮನಿ ಸಹ ಝೂಮ್ ಬಳಕೆಯ ಮೇಲೆ ನಿರ್ಬಂಧ ಹೇರಿತ್ತು.
ಭಯ ಯಾಕೆ?
ಅಪ್ಲಿಕೇಶನ್‌ಗಳಿಂದ ಚೀನಾ ಏನು ಮಾಡಬಹುದು ಎಂದು ಪ್ರಶ್ನೆ ಏಳುವುದು ಸಹಜ. ಸದ್ಯ ಮೊಬೈಲ್ ಕ್ಷೇತ್ರದಲ್ಲಿ ಚೀನಾ ಕಂಪನಿಗಳೇ ಟಾಪ್ ಸ್ಥಾನದಲ್ಲಿವೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಒಂದು ಬಿಟ್ಟರೆ ಫೋನಿನ ಹಾರ್ಡ್ ವೇರ್ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್‌ಗಳ ಸಂಪೂರ್ಣ ಹಿಡಿತ ಚೀನಾಕ್ಕಿದೆ. ಹೀಗಾಗಿ ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಇಡಿ ದೇಶದ ಪ್ರಜೆಗಳ ಸಂವಹನ ವ್ಯವಸ್ಥೆಯನ್ನು ತನ್ನತ್ತ ತೆಗೆದುಕೊಳ್ಳಬಹುದು ಎಂಬ ಆರೋಪ ಈ ಹಿಂದಿನಿಂದಲೂ ಇದೆ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಸಂವಹನ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ಪಡೆದರೆ ಯಾವ ಸರ್ಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ.