– ಹೀಗೆ ಮುಂದುವರಿದರೆ ದೊಡ್ಡ ಹಾನಿ ಸಂಭವಿಸುತ್ತೆ
ನವದೆಹಲಿ: ಚೀನಾದಂತೆ ಭಾರತ ವಿಶ್ವ ಮಟ್ಟದಲ್ಲಿ ತನ್ನ ಪ್ರಾಬಲ್ಯ ವೃದ್ಧಿಸುವ ಸ್ಪಷ್ಟ ಕಾರ್ಯತಂತ್ರ ಹೊಂದಿಲ್ಲ. ಈ ಕುರಿತು ಭಾರತ ಸ್ಪಷ್ಟ ಸಂದೇಶ ರವಾನಿಸದಿದ್ದರೆ, ಚೀನಾ ಸುಮ್ಮನಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
China has a clear strategic vision of shaping the world which India doesn’t have. India does this and that but doesn’t work strategically. China has tested twice. Once in Doklam and other in Ladakh: Congress leader Rahul Gandhi pic.twitter.com/bdPbGFd7Ju
— ANI (@ANI) January 19, 2021
Advertisement
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಇತ್ತೀಚೆಗೆ ಭಾರತೀಯ ಮತ್ತು ಚೀನಾ ಸೈನಿಕರು ಘರ್ಷಣೆ ನಡೆಸಿದ ಡೋಕ್ಲಾಮ್ ಹಾಗೂ ಲಡಾಖ್ ಘಟನೆಗಳನ್ನು ನೆನಪಿಸಿಕೊಂಡಿದ್ದು, ಚೀನಾ ಭಾರತದ ನ್ಯೂನತೆಗಳನ್ನು ಬಳಸಿಕೊಳ್ಳಲಿದೆ. ನಾವು ಹಾನಿಗೊಳಗಾಗುವ ದಿನ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ.
Advertisement
If India doesn’t give a clear message to them and make clear military, economic geopolitical strategy, China won’t stay quiet but will make the most out of it. The day it will happen, we’ll suffer damages: Congress leader Rahul Gandhi https://t.co/AJhNupCusb
— ANI (@ANI) January 19, 2021
Advertisement
ಚೀನಾ ಜಗತ್ತನ್ನು ರೂಪಿಸುವ ದೃಷ್ಟಿಕೋನ ಹೊಂದಿದಂತೆ ಭಾರತ ಹೊಂದಿಲ್ಲ. ಭಾರತ ಪ್ರಯತ್ನಿಸುತ್ತಿದೆ. ಆದರೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಚೀನಾ ಡೋಕ್ಲಾಮ್ ಹಾಗೂ ಲಡಾಖ್ ಎರಡು ಘಟನೆಗಳ ಮೂಲಕ ತೋರಿಸಿದೆ ಎಂದರು.
Advertisement
LIVE: देश के 62 करोड़ मेहनती किसान-मज़दूर के लिए न्याय की माँग के संबंध में मेरी पत्रकार वार्ता। https://t.co/hXaxdRD4DW
— Rahul Gandhi (@RahulGandhi) January 19, 2021
ಚೀನಾಗೆ ಭಾರತ ಸ್ಪಷ್ಟ ಸಂದೇಶ ನೀಡದಿದ್ದರೆ, ಮಿಲಿಟರಿ, ಆರ್ಥಿಕ ಹಾಗೂ ಭೌಗೋಳಿಕ ಕಾರ್ಯತಂತ್ರಗಳನ್ನು ರೂಪಿಸದಿದ್ದರೆ ಚೀನಾ ಸುಮ್ಮನಿರುವುದಿಲ್ಲ. ಇದರಿಂದ ಹೆಚ್ಚು ಲಾಭ ಪಡೆಯಲಿದೆ. ಒಂದು ವೇಳೆ ಹಾಗೆ ನಡೆದರೆ, ನಾವು ಭಾರೀ ನಷ್ಟ ಅನುಭವಿಸುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾದ ವಿರುದ್ಧ ಭಾರೀ ವಾಗ್ದಾಳಿ ನಡೆಸುತ್ತಿದ್ದು, ಚೀನಾ ತಗಾದೆ, ರೈತರ ಕಾನೂನುಗಳು ಹಾಗೂ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳ ಕುರಿತು ಟೀಕಿಸುತ್ತಿದ್ದಾರೆ. ಇಂದೂ ಸಹ ಸರ್ಕಾರ ಜಾರಿಗೆ ತಂದಿರುವ ರೈತರ 3 ಕಾನೂನುಗಳಲ್ಲಿನ ಅಪಾಯಗಳ ಕುರಿತು ಪುಸ್ತಕ ಬಿಡುಗಡೆ ಮಾಡಿದ್ದಾರೆ.