ನವದೆಹಲಿ: ವೈರಿ ಚೀನಾಗೆ ಡಬಲ್ ಶಾಕ್ ನೀಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ದೇಶದ ಯುವಕರಿಗೆ ಚಾಲೆಂಜ್ ನೀಡಿದ್ದಾರೆ.
ಚೀನಾದ 59 ಆ್ಯಪ್ ಮಾಡುವ ಮೂಲಕ ನೆರೆಯ ವೈರಿ ರಾಷ್ಟ್ರಕ್ಕೆ ಶಾಕ್ ನೀಡಿರುವ ಪ್ರಧಾನಿ ಮೋದಿ, ಮತ್ತೊಂದು ಹೆಜ್ಜೆಯನ್ನು ಇರಿಸಿದ್ದಾರೆ. ದೇಶದ ಯುವ ಪೀಳಿಗೆ ದೇಶಿಯ ಆ್ಯಪ್ ತಯಾರಿಸುವ ಮೂಲಕ ಆತ್ಮನಿರ್ಭರ ಭಾರತದ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.
Today there is immense enthusiasm among the tech & start-up community to create world class Made in India Apps. To facilitate their ideas and products @GoI_MeitY and @AIMtoInnovate are launching the Aatmanirbhar Bharat App Innovation Challenge. https://t.co/h0xqjEwPko
— Narendra Modi (@narendramodi) July 4, 2020
ಟ್ವೀಟ್: ಇಂದು ಮೇಡ್ ಇನ್ ಇಂಡಿಯಾ ಆ್ಯಪ್ ಮತ್ತು ಸ್ಟಾರ್ಟ್ ಅಪ್ ಮಾಡಲು ಯುವ ಸಮುದಾಯದಲ್ಲಿ ಉತ್ಸಾಹವಿದೆ. ಹೀಗಾಗಿ @GoI_MeitY ಮತ್ತು @AIMtoInnovate ಜೊತೆ ಸೇರಿ ಸಂಶೋಧನೆಯ ಚಾಲೆಂಜ್ ಸ್ವೀಕರಿಸಿ. ನಿಮ್ಮ ಸಂಶೋಧನೆಯ ಪ್ರೊಡೆಕ್ಟ್ ಅಥವಾ ಇದರಿಂದ ದೇಶಕ್ಕೆ ಒಳ್ಳೆಯದನ್ನ ಮಾಡೋ ಉದ್ದೇಶವಿದ್ದರೆ ತಂತ್ರಜ್ಞಾನದ ಸೇರಿಕೊಳ್ಳಿ. ಈ ಲಿಂಕ್ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂದು ಪ್ರಧಾನಿಗಳು ಹೇಳಿದ್ದಾರೆ.
ಚೀನಾದ 59 ಆ್ಯಪ್‍ಗಳು:
ಟಿಕ್ ಟಾಕ್, ಶೇರ್ ಇಟ್, ಕ್ವಾಯಿ, ಯುಸಿ ಬ್ರೌಸರ್, ಬೈದು ಮ್ಯಾಪ್, ಶೇನ್, ಕ್ಲ್ಯಾಶ್ ಆಪ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯೂಕ್ಯಾಮ್ ಮೇಕ್‍ಅಪ್, ಎಂಐ ಕಮ್ಯೂನನಿಟಿ, ಸಿಎಂ ಬ್ರೌಸರ್ಸ್, ವೈರಸ್ ಕ್ಲೀನರ್, ಅಪಸ್ ಬ್ರೌಸರ್, ರೋಮ್‍ವುಯ್, ಕ್ಲಬ್ ಫ್ಯಾಕ್ಟರಿ, ನ್ಯೂಸ್‍ಡಾಗ್, ಬ್ಯೂಟಿ ಪ್ಲಸ್, ವಿಯ್ ಚಾಟ್.
ಯುಸಿ ನ್ಯೂಸ್, ಕ್ಯೂಕ್ಯೂ ಮೇಲ್, ವೀಬೋ, ಕ್ಸೆಂಡರ್, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್ ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರೆಲ್ಲೆಲ್ ಸ್ಪೇಸ್, ಎಂಐ ವಿಡಿಯೋ ಕಾಲ್-ಕ್ಸಿಯೋಮಿ, ವಿಯ್ ಸಿಂಕ್, ಇಎಸ್ ಫೈಲ್ ಎಕ್ಸ್‍ಪ್ಲೋರರ್, ವಿವಾ ವಿಡಿಯೋ-ಕ್ಯೂಯು ವಿಡಿಯೋ, ಮೀತು, ವಿಗೋ ವಿಡಿಯೋ, ನ್ಯೂ ವಿಡಿಯೋ ಸ್ಟೇಟಸ್, ಡಿಯು ರೆಕಾರ್ಡರ್, ವೀಲ್ಟ್-ಹೈಡ್, ಕ್ಯಾಚೆ ಕ್ಲೀನರ್ ಡಿಯು ಆ್ಯಪ್ ಸ್ಟುಡಿಯೋ.
ಡಿಯು ಕ್ಲೀನರ್, ಡಿಯು ಬ್ರೌಸರ್, ಹ್ಯಾಗೋ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್- ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವುಯ್ ಮೀಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್‍ಲೇಟ್, ವಿಮೇಟ್, ಕ್ಯೂಕ್ಯೂ ಇಂಟರ್‍ನ್ಯಾಷನಲ್, ಕ್ಯೂಕ್ಯೂ ಸೆಕ್ಯೂರಿಟಿ ಸೆಂಟರ್, ಕ್ಯೂಕ್ಯೂ ಲಾಂಚರ್, ಯು ವಿಡಿಯೋ, ವಿ ಫ್ಲೈ ಸ್ಟೇಟಸ್ ವಿಡಿಯೋ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವೆಸಿ.