ಚಿರು ಫೋಟೋ ಇಟ್ಟು ಮೇಘನಾಗೆ ಸೀಮಂತ ಶಾಸ್ತ್ರ

Public TV
1 Min Read
meghana copy

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಪತಿ ಮೇಘಾನ್ ರಾಜ್ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ.

ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು, ಮನೆಯವರು ಸರಳವಾಗಿ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದಾರೆ. ಚಿರು ಕುಟುಂಬದವರು ಚಿರು ಅಗಲಿಕೆ ನೋವಲ್ಲಿದ್ದಾರೆ. ಹೀಗಾಗಿ ಬಹಳ ಖಾಸಗಿಯಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ.

1 copy

ಪತಿಯ ಅಗಲಿಕೆಯಲ್ಲಿ ಚಿರುವಿನ ದೊಡ್ಡ ಕಟೌಟ್ ಇಟ್ಟು ಮೇಘನಾ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಮೇಘನಾ ಚೇರ್ ಮೇಲೆ ಕುಳಿತಿದ್ದು, ಅವರ ಹಿಂದೆ ಚಿರುವಿನ ದೊಡ್ಡ ಕಟೌಟ್ ಇಟ್ಟಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ಚಿರು ತಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದು ಮೇಘನಾ ಸಂತಸಪಟ್ಟಿದ್ದಾರೆ.

MEGHANA

ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದು, ಮೇಘನಾ ರಾಜ್ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಮೇಘನಾ ರಾಜ್ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಜೋಷಾಯ್ ಮಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

WhatsApp Image 2020 10 04 at 2 copy

ಇತ್ತೀಚೆಗೆಷ್ಟೆ ಸ್ಯಾಂಡಲ್‍ವುಡ್ ಹಿರಿಯ ತಾರೆಯರು ನಟ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ಭೇಟಿ ಮಾಡಿ, ಕುಶಲೋಪಚರಿ ವಿಚಾರಿಸಿದ್ದರು. ಈ ಕುರಿತು ಮಾಳವಿಕಾ ಅವಿನಾಶ್ ಅವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು. ಮಾಳವಿಕಾ ಅವಿನಾಶ್ ಜೊತೆ ಸುಧಾರಾಣಿ, ಶೃತಿ ಹಾಗೂ ಅವರ ಮಗಳು ಮಿಲಿ ಕೂಡ ಭೇಟಿಯಾಗಿದ್ದರು.

meghana raj chiru sarja

ಮೆಘನಾ ರಾಜ್ ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮನೆಯಲ್ಲೇ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಮೆಘನಾ ಅವರು ಸೃಜನ್ ಲೋಕೇಶ್ ಜೊತೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಮಂದಿರಗಳು ಪ್ರದರ್ಶನ ಆರಂಭಿಸಿದ ಬಳಿಕ ಚಿತ್ರ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *