ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿದ ಕೊನೆಯ ದಿನದಂದು ಏನಾಯಿತು ಎಂದು ಪತ್ನಿ ಮೇಘನಾ ರಾಜ್ ನೆನಪಿಸಿಕೊಂಡಿದ್ದಾರೆ.
Advertisement
Advertisement
ಕನ್ನಡ ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷವಾಯಿತು. ಕಳೆದ ವರ್ಷ ಜೂನ್ 7 ರಂದು ಭಾರೀ ಹೃದಯಾಘಾತದಿಂದ ಬಳಲುತ್ತಿದ್ದ ಚಿರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 39 ವರ್ಷದ ಚಿರಂಜೀವಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಸ್ಯಾಂಡಲ್‍ವುಡ್, ಅಭಿಮಾನಿಗಳು, ಕುಟುಂಬಸ್ಢರಲ್ಲಿ ನಂಬಲು ಅಸಾಧ್ಯವಾಗದ ಸುದ್ದಿಯಾಗಿತ್ತು. ಆದರೆ ಈ ಸುದ್ದಿ ತುಂಬಾ ಕಷ್ಟಕರವಾಗಿದ್ದರೂ ನಂಬಲೇ ಬೇಕಾದ ಸತ್ಯವಾಗಿತ್ತು. ಇದನ್ನೂ ಓದಿ: ಚಿರುವನ್ನು ನೆನಪಿಸಿಕೊಂಡ ಮೇಘನಾ ರಾಜ್
Advertisement
Advertisement
ಸಂದರ್ಶನವೊಂದರಲ್ಲಿ ಮೇಘನಾ ರಾಜ್ ಅಂದು ಮನೆಯಲ್ಲಿ ಏನಾಯ್ತು? ಕೊನೆಯ ದಿನದಂದು ಪತಿಗೆ ಏನಾಯಿತು ಎಂದು ನೆನಪಿಸಿಕೊಂಡಿದ್ದರು. ಚಿರಂಜೀವಿ ಪ್ರೀತಿಯನ್ನು ಕಳೆದುಕೊಂಡಾಗ ಮೇಘನಾ ರಾಜ್ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದರು. ಐದು ತಿಂಗಳ ತುಂಬು ಗರ್ಭಿಣಿಯಾಗಿದ್ದಾಲೇ ಚಿರಂಜೀವಿಯನ್ನು ಕಳೆದುಕೊಳ್ಳಬೇಕಾಯಿತ್ತು.
View this post on Instagram
2020 ರ ಆರಂಭದಲ್ಲಿ ನಾನು ಮತ್ತು ಚಿರಂಜೀವಿ ಸರ್ಜಾ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದೆವು. ನನಗೆ ಐದು ತಿಂಗಳು ಪೂರ್ಣಗೊಂಡ ನಂತರ ಅಭಿಮಾನಿಗಳಿಗೆ ಈ ಸಿಹಿ ಸುದ್ದಿಯನ್ನು ತಿಳಿಸಬೇಕು ಅಂದುಕೊಂಡಿದ್ದೆವು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಚಿರಂಜೀವಿ ಸರ್ಜಾ ಮನೆಯಲ್ಲಿ ಕುಸಿದುಬಿದ್ದಾಗ ನನಗೆ ದೊಡ್ಡ ಆಘಾತವಾಗಿತ್ತು. ನಾವು ಚಿರುನನ್ನು ಹಾಗೆ ನೋಡಿರಲಿಲ್ಲ. ಅವನು ಪ್ರಜ್ಞೆ ಕಳೆದುಕೊಂಡು ಸ್ವಲ್ಪ ಸಮಯದ ನಂತರ ಮತ್ತೆ ಪ್ರಜ್ಞೆ ಬಂದಿತ್ತು. ಆದರೆ ನಾವು ಅಂಬುಲೆನ್ಸ್‌ಗಾಗಿ ಕಾಯುವ ಬದಲು, ಕುಟುಂಬ ಸದಸ್ಯರು ಎಲ್ಲರೂ ಸೇರಿ ಹತ್ತಿರದ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೇವು.
ವೈದ್ಯರು ಅವನನ್ನು ಎಮರ್ಜೆನ್ಸಿ ಕೋಣೆಗೆ ಕರೆದೊಯ್ದುರು. ಹೃದಯಘಾತವಾಗಿದೆ ಎಂದು ಹೇಳಿದರು. ಇದೆಲ್ಲವೂ ಇಷ್ಟು ಬೇಗ ಸಂಭವಿಸಿತು. ಅವರು ಆಸ್ಪತ್ರೆ ಹೊರಡುವ ಮೊದಲು ನೀನು ಏನು ಟೆನ್ಶನ್ ತಗೋಬೇಡಾ ನನಗೆ ಏನು ಆಗುವುದಿಲ್ಲ ಎಂದು ಅವರು ನನಗೆ ಹೇಳಿರುವ ಕೊನೆಯ ಮಾತಾಗಿದೆ ಎಂದು ಹೇಳುವಾಗ ಮೇಘನಾ ಅವರ ಕಣ್ಣಲ್ಲಿ ನೀರು ಜಾರಿತ್ತು.